
ಕಲಬುರಗಿ,ಮಾ.23: ನೀರು ಭೂಮಿ ಮೇಲೆ ಸಿಗುವ ಜೀವ ಜಲ. ಇದು ರಾಷ್ಟ್ರೀಯ ಆಸ್ತಿಯಾಗಿದೆ. ಪ್ರತಿ ಮನೆಯಲ್ಲಿ ಮಿತ ನೀರು ಬಳಕೆಯೊಂದಿಗೆ ನೀರಿನ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲು ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಭವಿಷ್ಯದ ಪೀಳಿಗೆಗೆ ಅಂತರ್ಜಲ ಮಟ್ಟ ಕಾಯ್ದುಕೊಳ್ಳಬೇಕಾಗ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಗ್ರಾಮಸ್ಥರಿಗೆ ಕರೆ ನೀಡಿದರು.
ರವಿವಾರ ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ಹಾಗೂ ನಂದಿಕೂರ ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ನಂದಿಕೂರ ಗ್ರಾಮದಲ್ಲಿ ಆಯೋಜಿಸಿದ ವಿಶ್ವ ಜಲ ದಿನ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೈನಂದಿನ ಜೀವನದಲ್ಲಿ ನೀರಿನ ಅವಶ್ಯಕತೆ ಮತ್ತು ಜವಾಬ್ದಾರಿಯುತ ಲವಾಗಿ ಅದರ ಬಳಕೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಅನಗತ್ಯ ನಲ್ಲಿಯಿಂದ ನೀರು ಪೆÇೀಲಾಗದಂತೆ ನೋಡಿಕೊಳ್ಳಿ ಎಂದರು.
ಮನೆ ಮಟ್ಟದಲ್ಲಿ ಸೋಕ್ ಪಿಟ್‍ಗಳು ಮತ್ತು ಸಮುದಾಯ ಮಟ್ಟದಲ್ಲಿ ಲೀಚ್ ಪಿಟ್‍ಗಳು ಮತ್ತು ರೀಚಾರ್ಜ್ ಪಿಟ್‍ಗಳು, ಜೊತೆಗೆ ಮೇಲ್ಛಾವಣಿ ಮಳೆ ನೀರು ಕೊಯ್ಲು ರಚನೆಗಳ ಕುರಿತು ಪ್ರಾಯೋಗಿಕ ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದಲ್ಲದೆ ಜಿಲ್ಲೆಯಾದ್ಯಂತ ನೀರಿನ ಸಾಕ್ಷರತೆ, ಅಂತರ್ಜಲ ಸಂರಕ್ಷಣೆ ಮತ್ತು ಸುಸ್ಥಿರ ನೀರಿನ ನಿರ್ವಹಣೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಜಾಗೃತಿ ಉಂಟು ಮಾಡುವ ಕೆಲಸ ಜಿಲ್ಲಾ ಪಂಚಾಯತ್ ಮಾಡುತ್ತಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಜಲ ಮೂಲಗಳಾದ ಕೆರೆ, ಬಾವಿ, ಕೊಳವೆ ಬಾವಿ, ಗುಮ್ಮಿ, ಪುಷ್ಕರಣಿಗಳಂತಹ ಜಲ ಮೂಲಗಳನ್ನು ಸ್ವಚ್ಚವಾಗಿಟ್ಕುಕೊಳ್ಳುವುದರ ಜೊತೆಗೆ ಹಳ್ಳಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಿ.ಇ.ಓ ಭಂವರ್ ಸಿಂಗ್ ಮೀನಾ ಕರೆ ನೀಡಿದರು.
ಕಲುಷಿತ ನೀರು ಸೇವೆನೆಯಿಂದ ಯಾವುದೇ ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ತಾಲೂಕಾ ಪಂಚಾಯತ್.ಇ.ಓ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯವರನ್ನೆ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಗ್ರಾಮೀಣ ಭಾಗದಲ್ಲಿ ನೀರು ಪೂರೈಕೆಯ ಗುಮ್ಮಿ, ಓ.ಎಚ್.ಟಿ ಟ್ಯಾಂಕ್, ವಾಟರ್ ಪೈಪಲೈನ್, ಕೊಳವೆ ಬಾವಿ ಸುತ್ತ ನಿರಂತರ ಸ್ವಚ್ಛತೆ ಮಾಡುವುದರ ಜೊತೆಗ ಪ್ರತಿ ಹಂತದಲ್ಲಿಯೂ ಕ್ಲೋರಿನೇಷನ್ ಮಾಡಿ ನೀರು ಶುದ್ದೀಕರಣಕ್ಕೆ ಬೇಕಾದ ಬ್ಲೀಚಿಂಗ್ ಪೌರ್ ದಾಸ್ತಾನು ಮಾಡಿಕೊಳ್ಳಬೇಕು. ಕೊಲವೆ ಬಾವಿ ಗಳಿಗೆ ಯಾವುದೇ ಕಾರಣಕ್ಕೂ ಚರಂಡಿ ನೀರು ಕುಡಿಯುವ ನೀರಿಗೆ ಸೇರದಂತೆ ಕಟ್ಟೆಚ್ಚರ ವಹಿಸಬೇಕು. ಕೇಸಿಂಗ್ ಪೈಪ್ ಕನಿಷ್ಟ ನೆಲದಿಂದ ಎರಡು ಅಡಿ ಎತ್ತರ ಇರುವಂತೆ ನೋಡಿಕೊಳ್ಳಬೇಕು ಎಂದರು.
ಬೇಸಿಗೆ ಸಮಯ ಇದಾಗಿರುವುದರಿಂದ ನೀರು ಸರಬರಾಜು ವ್ಯವಸ್ಥೆಯಲ್ಲಿ ಸಣ್ಣಪುಟ್ಟ ದುರಸ್ತಿಗಳಿದಲ್ಲಿ ಕೂಡಲೆ ಸರಿಪಡಿಸಿ ನೀರು ಪೆÇೀಲಾಗುವುದನ್ನು ತಡೆಯಬೇಕು. ನೀರಿನ ಅಭವ ಕಂಡುಬಂದಲ್ಲಿ ಅಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಪ್ರಸ್ತುತ ಜಿಲ್ಲಾ ಪಂಚಾಯತ್ ಬಳಿ 5 ಸರ್ಕಾರಿ ಟ್ಯಾಂಕರ್‍ಗಳಿವೆ ಎಂದರು.
ನೀರು ಗುಣಮಟ್ಟ ಪರಿಶೀಲನಾ ಅಭಿಯಾನಕ್ಕೆ ಚಾಲನೆ:
ಇದೇ ಸಂದರ್ಭದಲ್ಲಿ ಗ್ರಾಮೀಣ ಜನವಸತಿಗೆ ಪೂರೈಸುವ ನೀರಿನ ಗುಣಮಟ್ಟ ಪರಿಶೀಲನೆಗೆ ಫೀಲ್ಡ್ ಟೆಸ್ಟ್ ಕಿಟ್ ಅಭಿಯಾನಕ್ಕೆ ಸಿ.ಇ.ಓ ಭಂವರ್ ಸಿಂಗ್ ಮೀನಾ ಚಾಲನೆ ನೀಡಿ ನಂದಿಕೂರ ಗ್ರಾಮದಲ್ಲಿ ಆರ್.ಓ ಪ್ಲ್ಯಾಂಟ್ ನೀರು, ಕೊಳವೆ ಬಾವಿ ನೀರು, ಟ್ಯಾಪ್ ನೀರು ಮತ್ತು ಬಾವಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸಿ ಸಮುದಾಯಕ್ಕೆ ಅದರ ಫಲಿತಾಂಶ ಸಹ ವಿವರಿಸಿದರು.
ನಂತರ ಮಾತನಾಡಿ, ಮಳೆಗಾಲ ಮುನ್ನ ಮತ್ತು ನಂತರ ಆಗಾಗ ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸಿ ವರದಿ ನೀಡಬೇಕು. ಜಲ ಮೂಲಗಳು ಕಲುಷಿತಗೊಂಡಲ್ಲಿ ಪರ್ಯಾಯ ಜಲಮೂಲ ಪತ್ತೆ ಹಚ್ಚಿ ಅಲ್ಲಿಂದ ಜನವಸತಿ ಪ್ರದೇಶಗಳಿಗೆ ನೀರು ಪೂರೈಸಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಣ್ಮಣ ಶೃಂಗೇರಿ, ಸಹಾಯಕ ಕಾರ್ಯದರ್ಶಿ ರೇವಣಸಿದ್ದಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಇ. ಜಗದೇವಪ್ಪ ಜೀವಣಗಿ, ಪಿ.ಡಿ.ಓ ಸಂದೀಪ ಗುತ್ತೇದಾರ ಹಾಗೂ ಇತರೆ ಸಿಬ್ಬಂದಿಗಳಿದ್ದರು.






















