ಪರಿಶಿಷ್ಟರಿಗೆ ಬಜೆಟ್‍ನಲ್ಲಿ ಆದ್ಯತೆ ನೀಡಲು ಆಗ್ರಹಿಸಿ ಮಾ.4 ರಂದು ಧರಣಿ ವಿಶ್ವರಾದ್ಯ ಗಂವ್ಹಾರ

ಜೇವರ್ಗ,ಮಾ.3-ಪರಿಶಿಷ್ಟ ಸಮುದಾಯಕ್ಕೆ ಬಜೆಟ್‍ನಲ್ಲಿ ನ್ಯಾಯ ಒದಗಿಸಿ ಶೇಕಡಾ 24.1 ಜನಸಂಖ್ಯೆಗೆ ತಕ್ಕ ನ್ಯಾಯ ಸಿಗಲಿ ಎಂದು ಆಗ್ರಹಿಸಿ ರಾಜ್ಯಾದ್ಯಂತ ಮಾ.4 ರಂದು ಜಿಲ್ಲಾ ಕೇಂದ್ರ ದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ವಿಶ್ವರಾದ್ಯ ಗಂವ್ಹಾರ ತಿಳಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತರ ವಿಮೋಚನೆಗೆ ಶಿಕ್ಷಣ ಅತ್ಯಗತ್ಯವೆಂದು ಹೇಳಿದ್ದರು. ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಯಂತವಾದ ಶೇಕಡಾ 24ರಷ್ಟು ಮೀಸಲಿಡಬೇಕು. ಮೀಸಲಿಟ್ಟ ಹಣವನ್ನು ಅದೇ ಸಮುದಾಯದ ಏಳಿಗೆಗೆ ಮಾತ್ರ ಬಳಸಬೇಕು. ಇತರ ಯೋಜನೆಗಳಿಗೆ ವರ್ಗಾಯಿಸಬಾರದು. ವಸತಿ ನಿಲಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯ ಬಜೆಟ್ ಮಂಡನೆಯಾಗುತ್ತಿರುವ ಈ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಹಕ್ಕುಗಳು ಸಿಗುವುದಿಲ್ಲ. ಒಳಮೀಸಲಾತಿಯಲ್ಲಿ ಸೃಷ್ಟಿಯಾ ಗಿರುವ ರೋಸ್ಟರ್ ಗೊಂದಲವನ್ನು ಸರಿ ಪಡಿಸಿ ಎಲ್ಲ 101 ಪರಿಶಿಷ್ಟ ಜಾತಿಗೂ ಅನ್ಯಾಯವಾಗದಂತೆ ನೇಮಕಾತಿ ಮಾಡಲು ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್ ಬಯಸುವ ಅರ್ಜಿ ಸಲ್ಲಿಸುವ ಎಲ್ಲ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಬೇಕು. ಅರ್ಚಕ ಮತ್ತು ಸೌರ ಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕ ‘ಗೊಳಿಸಬೇಕು. ಎರಡು ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಅನು ಷ್ಠಾನಕ್ಕೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಂಗಾಮಿ ಪೌರಕಾರ್ಮಿಕರನ್ನು ಖಾಯಂ ಗೊಳಿಸಬೇಕು. ಖಾಸಗಿ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿ ಗೊಳಿಸಬೇಕು. ಎಸ್‍ಸಿ, ಎಸ್‍ಟಿ. ಸಮುದಾಯದ ಬ್ಯಾಕ್ ಲ್ಯಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಉಚ್ಚ ನ್ಯಾಯಾ ಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾ ಧೀಶರುಗಳ ನೇಮಕಾತಿಯಲ್ಲಿ ಮೀಸ ಲಾತಿಯನ್ನು ಅನುಸರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾರ್ಚ್ 4ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯುವ ಪ್ರತಿಭಟನಾ ಧರಣಿಗೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕೋರಿದ್ದಾರೆ.