
ಗುರುಮಠಕಲ್,ಮಾ.3: ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಚಿಂತಕುಂಟಾ ಗ್ರಾಮದ ಯುವಕ ನಾಗೇಶ್ ಯಾದವ್ 2026 ನೇ ಸಾಲಿನ ರಾಷ್ಟ್ರೀಯ ಹಿರಿಯರ ಬೀಚ್ ವಾಲಿಬಾಲ್ ಚಾಂಪಿಯನ್ಶಿಪ್ ಗೆ ಆಯ್ಕೆಯಾಗಿದ್ದಾರೆ.
ಸುಮಾರು ವರ್ಷಗಳಿಂದ ರಾಷ್ಟ್ರೀಯ ತಂಡಕ್ಕೆ ಆಡಬೇಕು ಎಂದು ಕನಸು ಕಂಡಿದ್ದ ನಾಗೇಶ್, ಈ ಅವಕಾಶಕ್ಕಾಗಿ ತುಂಬಾ ಶ್ರಮಿಸಿದ್ದರು.
ಈ ಹಿಂದೆ ಚಿಕ್ಕವನಿದ್ದಾಗ ಕುರಿ ಕಾಯುತ್ತಿದ್ದ ನಾಗೇಶರಿಗೆ ವಾಲಿಬಾಲ್ ಆಟದಲ್ಲಿ ಆಸಕ್ತಿ ಇದ್ದಿದ್ದನ್ನು ಗಮನಿಸಿದ ಪ್ರಸ್ತುತ ಕರ್ನಾಟಕ ರಾಜ್ಯ ಪೆÇೀಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ಅಣ್ಣ ಮೊಗಲಪ್ಪ ಯಾದವ್, ಕೇರಳದಲ್ಲಿ ವಾಲಿಬಾಲ್ ತರಬೇತಿಗೆ ಸೇರಿಸಿದರು. ಕರ್ನಾಟಕದಲ್ಲಿ ರಾಜಕೀಯ ಗೊಂದಲಗಳ ಮಧ್ಯೆ ಅವಕಾಶಕ್ಕಾಗಿ ಶ್ರಮಿಸಿ ಬೇಸತ್ತ ನಾಗೇಶ್, ಇದೀಗ ಕೇರಳ ರಾಜ್ಯವನ್ನು ಪ್ರತಿನಿಧಿಸಲು ಮುಂದಾಗಿದ್ದಾರೆ. ನಾಗೇಶ್ ರವರ ಈ ಸಾಧನೆಗೆ ಸಂಕಲ್ಪ ವೇದಿಕೆಯ ರಾಜ್ಯಾಧ್ಯಕ್ಷ ಜಗದೀಶ್ ಮಾಧ್ವರ್ ಹಾಗೂ ಗ್ರಾಮದ ಹಿರಿಯ ಮುಖಂಡರು ಅಭಿನಂದಿಸಿದ್ದಾರೆ.



























