
ಜೇವರಗಿ,ಮಾ.3: ತಾಲ್ಲೂಕಿನ ಮದರಿ ಗ್ರಾಮಪಂಚಾಯಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ವಿಜಯಕುಮಾರ ಸಾಹು ಬೆಲ್ಲದ್, ಉಪಾಧ್ಯಕ್ಷೆಯಾಗಿ ಸುದೀಷ್ಣಾ ಸಂಗಯ್ಯ ಸ್ವಾಮಿ ಮದರಿ ಆಯ್ಕೆಯಾಗಿದ್ದಾರೆ. ಗ್ರಾಪಂನಲ್ಲಿ ಒಟ್ಟು 14 ಜನ ಸದಸ್ಯರಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ 12 ಜನ ಸದಸ್ಯರು ಭಾಗವಹಿಸಿದ್ದರು.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ, ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾದ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವಿರೋಧ ಆಯ್ಕೆ ಘೋಷಿಸಿದರು. ಪಿಡಿಒ ರುದ್ರಯ್ಯಸ್ವಾಮಿ ಹಿರೇಮಠ, ಬಿಲ್ ಕಲೆಕ್ಟರ್ ರಾಜು ಚಿನಗುಡಿ ಇದ್ದರು.
ವಿಜಯೋತ್ಸವ:
ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗುತ್ತಿದ್ದಂತೆ ಗ್ರಾಪಂಎದುರು ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ, ಮುಖಂಡರಾದ ರಮೇಶ ಬಾಬು ವಕೀಲ, ಬಸವರಾಜ ಸಾಹು ಅವಂಟಿ, ವಿಜಯಕುಮಾರ ಪಾಟೀಲ ಮದರಿ, ಸಂತೋಷಗೌಡ ಯನಗುಂಟಿ, ಬಸವರಾಜ ಸಾಸಾಬಾಳ, ಸಂಗಯ್ಯಸ್ವಾಮಿ, ಸಾಹೇಬಗೌಡ ಮರತ್, ಹುಣಚಪ್ಪ ಮದರಿ, ಭೀಮಾಶಂಕರ ಪಾಟೀಲ, ಶ್ರೀಶೈಲ ಸಾಹು ಸಜ್ಜನ್, ಮಹೇಶ ಕಟ್ಟಿಸಂಗಾವಿ ಸೇರಿದಂತೆ ಹಲವರಿದ್ದರು.



























