ವಿಜೃಂಭಣೆಯಿಂದ ಜರುಗಿದ ವರ್ಧಂತಿ ಮಹೋತ್ಸವ

ಕಲಬುರಗಿ,ಮಾ.3: ಇಲ್ಲಿನ ಹೊಸ ಜೇವರಗಿ ರಸ್ತೆ ಶ್ರೀನಗರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ
34ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಫೆ.27 ರಿಂದ ಮಾ.1 ರ ವರೆಗೆ ವಿಜೃಂಭಣೆಯಿಂದ ಜರುಗಿತು.
ಮೂರು ದಿನಗಳ ಕಾಲ ಪ್ರಭಂಜನ ಭಜನಾ ಮಂಡಳಿ, ಉಮಾಮಹೇಶ್ವರ ಭಜನಾ ಮಂಡಳಿಯಿಂದ ಸೌಂದರ್ಯ ಲಹರಿ ಹಾಗೂ ಚಂದ್ರಕಲಾ ಅವರಿಂದ ಸಂಗೀತ ಕಾರ್ಯಕ್ರಮ ಮತ್ತು ಕೊನೆಯ ದಿನ ಡಾ. ರಾಘವೇಂದ್ರ ಕಟ್ಟಿ ಯವರಿಂದ ಹಾಸ್ಯ ಸಂಜೆ ಹಾಗೂ ಸತ್ಯಪ್ರಮೋದ ತೀರ್ಥ ಪಾರಾಯಣ ಸಂಘದಿಂದ ಪಾರಾಯಣ ಜರುಗಿತು.
ಶ್ರೀನಗರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಸಮಿತಿಯ ಅಧ್ಯಕ್ಷ ಶಾಮರಾವ್ ಬೆಳಗುಂಪಿ, ಉಪಾಧ್ಯಕ್ಷ ಭೀಮಸೇನರಾವ ದೇಶಪಾಂಡೆ ಮಳ್ಳಿ ಮತ್ತು ಕಾರ್ಯದರ್ಶಿ ಕೃಷ್ಣ ಎಳವಾರ ಅವರ ನೇತೃತ್ವ ಹಾಗೂ ಆಡಳಿತ ಮಂಡಳಿಯ ಸದಸ್ಯರು ಶ್ರೀನಗರ ಭಕ್ತಾದಿಗಳು ಮೂರು ದಿನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.