ಉದ್ಗೀರದಲ್ಲಿ ಮಾರ್ಚ್ 6ರಿಂದ ಅಕ್ಕಮಹಾದೇವಿ ಚಲನಚಿತ್ರ ಪ್ರದರ್ಶನ: ಪ್ರತಿದಿನ 2 ಶೋ

ಬೀದರ್, ಮಾ 3: ಜಗನ್ಮಾತೆ ಅಕ್ಕ ಮಹಾದೇವಿ ಅವರ ಜೀವನಾಧಾರಿತ ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರವು ಇದೇ ಮಾರ್ಚ್ 6, ಶುಕ್ರವಾರದಿಂದ ಮಹಾರಾಷ್ಟ ರಾಜ್ಯದ ಲಾತೂರ ಜಿಲ್ಲೆಯ ಉದ್ಗೀರ ನಗರದ ಕಲ್ಪನಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ಬೆಳಿಗ್ಗೆ (ಮಾನಿರ್ಂಗ್) ಹಾಗೂ ಮಧ್ಯಾಹ್ನ (ಮ್ಯಾಟ್ನಿ) ಸೇರಿ ಎರಡು ಪ್ರದರ್ಶನಗಳು ನಡೆಯಲಿವೆ.
ಅಕ್ಕ ಮಹಾದೇವಿಯವರ ಕುರಿತು ಇದು ವರೆಗೆ ಗ್ರಂಥಗಳಲ್ಲಿ ಓದಿ ತಿಳಿದುಕೊಳ್ಳಲಾಗುತ್ತಿತ್ತು. ಇದೀಗ ಅವರ ಜೀವನ ಚರಿತ್ರೆ ಆಧರಿಸಿ ನಿರ್ಮಿಸಲಾದ ಈ ಚಲನಚಿತ್ರವು ಪ್ರೇಕ್ಷಕರಿಗೆ ಅವರ ಆದರ್ಶಮಯ, ತಪಸ್ವಿ ಜೀವನ ಪರಿಚಯಿಸುವ ಉದ್ದೇಶ ಹೊಂದಿದೆ.
ಲಿಂಗಾಯತ ಸಮಾಜದ ಹಿರಿಯ ನಾಯಕಿ ಲಕ್ಷ್ಮೀಬಾಯಿ ಪಾಂಢರೆ ಅವರು ಎಲ್ಲಾ ಜಾತಿ-ಧರ್ಮಗಳ ಬಂಧುಗಳು ಈ ಚಲನಚಿತ್ರವನ್ನು ವೀಕ್ಷಿಸಿ ಅಕ್ಕ ಮಹಾದೇವಿಯವರ ಜೀವನ ಸಂದೇಶ ಅರಿತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಉದ್ಗೀರ ಹಾಗೂ ಲಾತೂರ್ ಜಿಲ್ಲೆಯ ಸಮಸ್ತ ಸಮಾಜಬಾಂಧವರು ಈ ಚಲನಚಿತ್ರವನ್ನು ತಪ್ಪದೇ ವೀಕ್ಷಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಭರತ್ ಸಿನಿ ಕ್ರಿಯೇಶನ್ ನಿರ್ಮಿತ ಈ ಚಿತ್ರಕ್ಕೆ ವಿಷ್ಣುಕಾಂತ ಬಿ.ಜೆ. ಅವರು ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದಾರೆ. ಪಾಲಾಮಿ ಸೇನಾಪತಿ ಸಂಗೀತ ಸಂಯೋಜನೆ ನೀಡಿದ್ದು, ರವಿ ಸುವರ್ಣ ಅವರು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಬಹು ನಿರೀಕ್ಷಿತ ಮತ್ತು ಚರ್ಚಿತ ಈ ಚಲನಚಿತ್ರ ಕನ್ನಡ ಭಾಷೆಯಲ್ಲಿ ನಿರ್ಮಾಣವಾಗಿದ್ದರೂ, ಇತರೆ ಭಾಷಿಕರಿಗೂ ಅರ್ಥವಾಗುವ ರೀತಿಯಲ್ಲಿ ಚಿತ್ರ ರೂಪುಗೊಂಡಿದೆ.