
ಚಿತ್ತಾಪುರ:ಮಾ.3: ಆರೋಗ್ಯದ ಹಿತದೃಷ್ಟಿಯಿಂದ ರಾಸಾಯನಿಕ, ಹಾನಿಕಾರಕ ಬಣ್ಣ ಉಪಯೋಗಿಸದೆ ನೈಸರ್ಗಿಕ ಬಣ್ಣ ಉಪಯೋಗಿಸಿ ಎಲ್ಲರೂ ಸಂಭ್ರಮದಿಂದ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸಬೇಕು ಎಂದು ಪಿಎಸ್’ಐ ಮಂಜುನಾಥ ರೆಡ್ಡಿ ಹೇಳಿದರು.
ಪಟ್ಟಣದ ಪೆÇಲೀಸ್ ಠಾಣೆಯ ಆವರಣದಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾರನ್ನು ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಬೇಡಿ, ನಾವು ಆಚರಿಸುವ ಹಬ್ಬ ಇತರರಿಗೆ ತೊಂದರೆ ಆಗಬಾರದು. ಹೋಳಿ ಹಬ್ಬದ ಜೊತೆಗೆ ಮುಸ್ಲಿಂರ ಪವಿತ್ರ ರಂಜಾನ್ ಹಬ್ಬ ಹಾಗೂ ಪಿಯು ದ್ವಿತೀಯ ವರ್ಷದ ಪರೀಕ್ಷೆ ಇರುವುದರಿಂದ ಯಾರಿಗೂ ತೊಂದರೆಯಾಗದಂತೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎಂದು ಕರೆ ನೀಡಿದರು.
ಮಾ.3 ಕ್ಕೆ ಕಾಮದಹನ ದಿನದಂದು ಎಲ್ಲರೂ ಜಾಗೃತರಾಗಿ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಮಾ.4 ರಂದು ದುಲಂಡಿ ದಿನದಂದು ಬೆಳಿಗ್ಗೆ ಯಿಂದ 12.30 ಗಂಟೆಯವರೆಗೆ ಬಣ್ಣವಾಡಲು ಅವಕಾಶ ನೀಡಲಾಗಿದೆ ಎಲ್ಲರೂ ನಿಗದಿತ ಅವಧಿಯಲ್ಲಿ ಬಣ್ಣದ ಆಟ ಮುಗಿಸಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಪಟ್ಟಣದ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಸಕಾಲದಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಮುಖಂಡರಾದ ಜಗದೀಶ ಚವ್ಹಾಣ, ಹಣಮಂತ ಸಂಕನೂರ್, ಬಾಬು ಕಾಶಿ, ಲಿಂಕ್ ರಫೀಕ್, ನಾಗರಾಜ ರೇಶ್ಮಿ, ಅನುಪ್ ಮಾತನಾಡಿದರು.
ಅಗ್ನಿಶಾಮಕದಳದ ಅಧಿಕಾರಿ ಸಲೀಂ, ಎಎಸ್’ಐ ವಿಠ್ಠಲ್ ಬಿರಾದಾರ, ಭೀಮಸಿಂಗ್ ಚವ್ಹಾಣ, ರಾಮಲಿಂಗ ಬಾನಾರ್, ಮಹ್ಮದ್ ಯೂನೂಸ್, ಸಂತೋಷ ಕಲಾಲ್, ದೇವಿದಾಸ ಚವ್ಹಾಣ, ಶ್ರೀಮಂತ ಗುತ್ತೇದಾರ, ರವಿ ಜಾಧವ, ಪ್ರಭು ಹಲಕಟ್ಟಿ, ಬಾಲಾಜಿ ಬುರಬುರೆ, ಸೂರ್ಯ, ಮಹೇಶ ಸಾತನೂರ್, ಇಸ್ಮಾಯಿಲ್ ಸೇರಿದಂತೆ ಇತರರು ಇದ್ದರು.
ಮಹೇಶ ನಿರೂಪಿಸಿದರು. ದತ್ತು ಜಾನೆ ವಂದಿಸಿದರು.



























