
ಬೀದರ:ಮಾ.3:ಬಿ.ವಿ. ಭೂಮರೆಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟೀಯ ವಿಜ್ಞಾನ ದಿನಾಚರಣೆಯನ್ನು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗು ಬಿ. ವಿ. ಬಿ. ಶಾಲಾ ಕಾಲೇಜು ಆವರಣದ ಸಂಚಾಲಕರಾದ ಡಾ. ರಜಿನೀಶ ಎಸ್ ವಾಲಿ ಯವರ ಅಮೃತ ಹಸ್ತದಿಂದ ಸಸಿಗೆ ನೀರೆರುವುದರ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಇಂದು ನಮ್ಮ ಜಗತ್ತು ವಿಜ್ಞಾನದ ಹಲವಾರು ಆವಿಷ್ಕಾರಗಳಿಂದ ದೇಶ ವಿದೇಶಗಳಲ್ಲಿ ನಮ್ಮ ಭಾರತೀಯ ವಿಜ್ಞಾನಿಗಳು ಸಂಶೋಧನೆಗಳನ್ನು ನಡೆಸಿ ಮಂಗಳಗ್ರಹ ಮತ್ತು ಚಂದ್ರಲೋಕದಲ್ಲಿ ಮಾನವಸಹಿತ ಅಂತರಿಕ್ಷ ನೌಕೆಗಳನ್ನು ಹಾರಿಸಿ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಹಾಗೂ ಇತ್ತೀಚಿಗೆ ನಮ್ಮ ಭಾರತ ಮೂಲದ ಸುನೀತಾ ವಿಲಿಯಮ್ಸ್ ಇಬ್ಬರ ಹೆಣ್ಣುಮಕ್ಕಳ ಸಾಧನೆ ಇಡೀ ಜಗತ್ತು ಬೆರಗಾಗುವಂತೆ ನೋಡಲು ಇವರು ಪಡೆದ ವಿಜ್ಞಾನ ಶಿಕ್ಷಣ ಹಾಗು ಇವರನ್ನು ಭೋದಿಸಿದ ಗುರುಗಳ ಸಾಧನೆ ಮೆಚ್ಚುವಂತದ್ದು ತಾವು ಸಹ ಇಂದಿನ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿ ಗುರುತರವಾದ ಶಿಕ್ಷಣ ಪಡೆದು ಮಹಾವಿದ್ಯಾಲಯದ ಮತ್ತು ನಿಮ್ಮ ಪಾಲಕರ ಹಾಗೂ ಗುರುಗಳ ಹೆಸರುಗಳನ್ನೂ ದೇಶ ವಿದೇಶಗಳಲ್ಲಿ ಹರಡಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ನ್ಯಾಷನಲ್ ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯರು ಮತ್ತು ಸರಕಾರಿ ಪದವಿ ಮಹಾವಿದ್ಯಾಲಯ ತುಮಕೂರಿನ ಡಾ. ಕಮಲಾ ವೈ. ಸಿ. ಅವರು ಮಾತನಾಡುತ್ತಾ ವಿಜ್ಞಾನಕ್ಕೆ ಪ್ರಥಮ ಬಾರಿಗೆ ನೋಬಲ್ ಪಡೆದ ಭಾರತೀಯ ವಿಜ್ಞಾನಿ ಎಂದರೆ ಸರ್ ಸಿ ವಿ ರಾಮನ್ ಇವರ ಬೆಳಕಿನ ಪ್ರತಿಫಲನಕ್ಕೆ ವಿಶ್ವವೇ ನಿಬ್ಬೆರಗಾಗಿ ನೋಡಿತ್ತು ಇವರು ಕಂಡು ಹಿಡಿದ ರಾಮನ್ ಎಫೆಕ್ಟ್ ಗೆ ಕ್ರಿಶ. 1930 ರಲ್ಲಿ ಪ್ರಥಮಬಾರಿಗೆ ನೋಬಲ್ ದೊರಕಿತು ಇವರ ಸಾಧನೆ ಭಾರತಕಷ್ಟೆ ಅಲ್ಲ ಇಡೀ ವಿಶ್ವ ನಮ್ಮ ದೇಶದ ಕಡೆಗೆ ತಿರುಗಿನೋಡುವಂತೆ ಮಾಡಿದ ಮಹಾನ್ ವಿಜ್ಞಾನಿ ಸರ್ ಸಿ ವಿ ರಾಮನರ ಪ್ರತಿಭೆ ಇಂದಿನ ಇಂದಿನ ಮಕ್ಕಳಿಗೆ ದಾರಿದೀಪವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಇನ್ನೊರ್ವ ಅತಿಥಿಗಳಾದ ಪೆÇ್ರ. ಎಂ. ಎಸ್. ಜೋಗದ ರವರು ಮಾತನಾಡುತ್ತ ಇವತ್ತಿನ ವಿಜ್ಞಾನ ಪ್ರಪಂಚದಲ್ಲಿ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ ಮಹಿಳೆಯರು ಸಹ ವಿಜ್ಞಾನದ ಅಂಶಗಳು ಅರಿತು ಹೊಸ ಹೊಸ ಲೇಖನಗಳ ಜೊತೆಗೆ ಸಂಶೋಧನೆಗಳನ್ನು ಮಾಡಿ ವಿಜ್ಞಾನ ಲೋಕಕ್ಕೆ ಮಾದರಿಯಾಗಿದ್ದಾರೆ ಉದಾ : ನಮ್ಮ ಪಕ್ಕದ ಜಿಲ್ಲೆಯ ಡಾ. ವಿಜಯಲಕ್ಷ್ಮಿ ದೇವಮಾನೇ ಅವರ ಕ್ಯಾನ್ಸರ್ ಚಿಕಿತ್ಸೆಗೆ ಔಷಧಿ ಕಂಡು ಹಿಡಿದು ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡ ಕೀರ್ತಿ ಇಡೀ ಮುಂಬರುವ ಮಹಿಳಾ ವಿಜ್ಞಾನಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದು ನುಡಿದರು
ಕಾರ್ಯಕ್ರಮದ ವೇದಿಕೆಯಮೇಲೆ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪಾ ರಾಗಾ ಹಾಗೂ ಬೀದರ್ ಜಿಲ್ಲಾ ಘಟಕದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕಲಾಲ ದೇವಿ ಪ್ರಸಾದ ರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಯೋಜಕರು ಹಾಗೂ ಕಾರ್ಯದರ್ಶಿಗಳು ಸ್ವದೇಶಿ ವಿಜ್ಞಾನ ಆಂದೋಲನ ಬೆಂಗಳೂರು ಆದಂತಹ ಶ್ರೀ ದಾನಿ ಬಾಬುರಾವ ಅವರು ನುಡಿದರು
ಈ ಕಾರ್ಯಕ್ರಮದಲ್ಲಿ ಅತ್ತ್ಯುತ್ತಮ ವಿಜ್ಞಾನ ಶಿಕ್ಷಕರಿಗೆ ಪ್ರಶಸ್ತಿ ಹಾಗು ಪ್ರಮಾಣಪತ್ರಗಳನ್ನು ವಿತರಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ರೇಣುಕಾ ಎಂ ಸ್ವಾಮಿ ಯವರು ಪ್ರಾರ್ಥನಾಗೀತೆ ಹಾಡಿದರೆ, ಡಾ. ಶಿವಲೀಲಾ ಮಠಪತಿ ನಿರೂಪಿಸಿದರೆ, ಡಾ. ಮಲ್ಲಿಕಾರ್ಜುನ ಕೋಟೆ ವಂದಿಸಿದರು, ಈ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಎನ್.ಎಸ್.ಎಸ್./ಎನ್.ಸಿ.ಸಿ. ವಿದ್ಯಾರ್ಥಿಗಳು ಮತ್ತು ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.



























