ನಾಳೆ ರಂಗಸಂಭ್ರಮ

ರಬಕವಿ-ಬನಹಟ್ಟಿ,ಮಾ.3: ಬನಹಟ್ಟಿಯಲ್ಲಿ ಮಾ.4 ರಂದು ಹೋಳಿ ಹಬ್ಬದ ನಿಮಿತ್ತ ಎಸ್‍ಆರ್‍ಎ ಮೈದಾನದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಜರುಗುವ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ 40 ಜನ ಸುರಕ್ಷತಾ ಸಿಬ್ಬಂದಿ ಹಾಗೂ 10 ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯೆಂದು ಹಾಗೂ ವಾರ್ನೀಸ್ ಮತ್ತು ಟಾಪಿಂಗ್ ಬಣ್ಣ ಬಳಸಿದ ದುಷ್ಕರ್ಮಿಗಳನ್ನು ಕಾನೂನು ವಶಕ್ಕೆ ನೀಡಿ, ದಂಡನೆಗೊಳಪಡಿಸಲಾಗುತ್ತದೆಂದು ಸಿದ್ದು ಕೊಣ್ಣೂರ ಹೇಳಿದರು.


ಎಸ್‍ಆರ್‍ಎ ಮೈದಾನದಲ್ಲಿ ಶಾಮಿಯಾನ ಮತ್ತು ಸ್ಥಳ ವೀಕ್ಷಣೆ ಬಳಿಕ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಭದ್ರತೆ ಅನುಕೂಲಕ್ಕಾಗಿ ವಿಶೇಷ ಕಾಳಜಿ ವಹಿಸಲಾಗಿದೆ. ಸುಮಾರು 15 ರಿಂದ 20 ಸಾವಿರ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದ್ದು, ಉಪಾಹಾರ ಮತ್ತು ಆಹಾರ ಕೌಂಟರ್‍ಗಳನ್ನು ರಿಯಾಯತಿ ದರದಲ್ಲಿ ಒದಗಿಸಲು ತೀರ್ಮಾನಿಸಿದ್ದು, ಪರಂಪರಾಗತ ಹೋಳಿ ಆಚರಣೆಗೆ ವಿಶೇಷ ಮೆರಗು ಬರಲಿದೆಯೆಂದರು


ಭೀಮಶಿ ಮಗದುಮ್, ಸಂಜಯ ಜೋತಾವರ, ಮಲ್ಲಿಕಾರ್ಜುನ ಬಾಣಕಾರ, ನೀಲಕಂಠ ಮುತ್ತೂರ, ಸಿದ್ದಣ್ಣ ಮೇಣಿ, ದಾನಪ್ಪ ಹುಲಜತ್ತಿ, ಡಾ.ರವಿ ಜಮಖಂಡಿ, ಬಸವರಾಜ ರಾಯರ, ಬಸವರಾಜ ದಲಾಲ, ಶಂಕರ ಸೊರಗಾಂವಿ, ಸಂಗಮೇಶ ಮಡಿವಾಳ, ರಾಜೇಂದ್ರ ಭದ್ರನ್ನವರ, ಅಶೋಕ ಆಳಗೊಂಡ, ಹಣಮಂತ ಕೊಣ್ಣೂರ, ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ರಾಹುಲ ಕಲಾಲ, ಶ್ರೀಶೈಲ ದಭಾಡಿ, ಹಾರೂನ್ ಬೇವೂರ, ಬಸವರಾಜ ಯಂಡಿಗೇರಿ, ಕಿರಣ ಕರ್ಲಟ್ಟಿ, ಅಶೋಕ ಉಳ್ಳಾಗಡ್ಡಿ ಸೇರಿದಂತೆ ಅನೇಕರಿದ್ದರು.