ಶಿಥಿಲಕಟ್ಟಡ ದುರಸ್ತಿಗೆ ಆಗ್ರಹ


ಲಕ್ಷೆ÷್ಮÃಶ್ವರ,ಮಾ.೩: ಪುರಸಭೆಯಿಂದ ಸುಮಾರು ೨೫ ವರ್ಷಗಳ ಹಿಂದೆ ಪುರಸಭೆಯ ಪಕ್ಕದಲ್ಲಿಯೇ ನಿರ್ಮಿಸಿದ್ದ ವಾಣಿಜ್ಯ ಸಂಕಿರಣದ ಮೊದಲ ಮಹಡಿ ಪುರಸಭೆ ಕಾಂಪೌAಡಿಗೆ ಹೊಂದಿಕೊAಡಿರುವ ಒಂದು ಭಾಗ ಸಂಪೂರ್ಣ ಶಿಥಿಲಗೊಂಡು ಕಿಡಿಕಿ ಬಾಗಿಲುಗಳು ನೇತಾಡುತ್ತಿದ್ದು ಪೈರಿ ಸಹ ಹಾಳಾಗಿದೆ.


ಪುರಸಭೆಯ ಕಂಪೌAಡಿಗೆ ಹೊಂದಿಕೊAಡಿರುವ ಈ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು ಕೆಳಭಾಗದಲ್ಲಿ ಎರಡು ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ.


ಸುಮಾರು ೨೫ ವರ್ಷಗಳ ಹಿಂದೆ ನಿರ್ಮಿಸಿದ ಈ ಕಟ್ಟಡದಲ್ಲಿ ಮೊದಲ ನಾಡಕಚೇರಿ ಆರಂಭಗೊAಡಿತ್ತು ಅದು ಸ್ಥಳಾಂತರ ವಾದ ನಂತರ ಪುರಸಭೆಯವರು ಮೇಲಂತಸ್ತಿನ ಕಟ್ಟಡವನ್ನು ಸಂಪೂರ್ಣ ನಿರ್ಲಕ್ಷಿಸಿ ಅದನ್ನು ಉಗ್ರಾಣವನ್ನಾಗಿ ಮಾರ್ಪಡಿಸಿಕೊಂಡಿದ್ದು ಅದರಲ್ಲಿ ಈಗ ನಿರುಪಯುಕ್ತ ವಸ್ತುಗಳನ್ನು ತುಂಬಿದ್ದಾರೆ.


ಇದುವರೆಗೂ ಆಡಳಿತದಲ್ಲಿದ್ದ ಚುನಾಯಿತ ಪ್ರತಿನಿಧಿಗಳು ಸಹ ನಿರ್ಲಕ್ಷಿಸಿದ್ದು ಪುರಸಭೆಯ ಅಧಿಕಾರಿಗಳು ಗಂಗಾರಾಮ್ ಕಟ್ಟಡದ ದುರಂತ ಆಗುವ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.