
ಲಕ್ಷೆ÷್ಮÃಶ್ವರ,ಮಾ.೩: ಸಮೀಪದ ಕಳಸ ಗ್ರಾಮದಲ್ಲಿ ದಿನಾಂಕ ೫ ೬ ಮತ್ತು೭ ರಂದು ಶ್ರೀ ಗುರು ಗೋವಿಂದ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಗುರು ಗೋವಿಂದ ಭಟ್ಟರ ೧೫೬ನೇ ಪುಣ್ಯರಾಧನೆ ಹಾಗೂ ಪಾದುಕಾ ಪ್ರತಿಷ್ಠಾನದ ೨೯ನೇ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ.
ಮಾರ್ಚ್ ೫ರಂದು ಗುರುವಾರ ಮುಂಜಾನೆ ೫:೦೦ಯಿಂದ ಕಾಕಡಾರ್ತಿ ಸ್ತೋತ್ರ ಪಠಣ ಲಘು ರುದ್ರಾಭಿಷೇಕ ಪುಣ್ಯ ವಾಚನಾ ದೇವತಾ ಪ್ರತಿಷ್ಠಾನ ಕಾರ್ಯಗಳು ಮಧ್ಯಾಹ್ನ ೧೨:೩೦ ವರೆಗೆ ಜರುಗಲಿವೆ. ನಂತರ ಮಹಾಪ್ರಸಾದ ಸೇವೆ ಆರಂಭವಾಗುವುದು ರಾತ್ರಿ ೮:೦೦ಗೆ ಮಂತ್ರ ಪುಷ್ಪ ಅಷ್ಟಾವಧಾನ ಜರುಗಲಿದೆ.
ಮಾರ್ಚ್೬ ರಂದು ಶುಕ್ರವಾರ ಯಥಾಪ್ರಕಾರ ಪೂಜೆ ಪುನಸ್ಕಾರ ಅಭಿಷೇಕ ಕುಂಕುಮಾರ್ಚನೆ ನವಗ್ರಹ ಸಹಿತ ಶ್ರೀ ಮೃತ್ಯುಂಜಯ ಹೋಮ ಲಲಿತಾ ಹೋಮ ಜರುಗಲಿದೆ. ೧೦:೩೦ಕ್ಕೆ ಸಾಮೂಹಿಕ ಷಷ್ಟಾಬ್ದಿ ಸಮಾರಂಭ ಜರುಗಲಿದೆ. ನಂತರ ೧೨ ಗಂಟೆಗೆ ಶ್ರೀ ಗುರು ಗೋವಿಂದ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಕಲಬುರ್ಗಿಯ ಗೋ ಸೇವಕರಾದ ಮಹೇಶ್ ಬೀದರಕರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಸಾನಿಧ್ಯವನ್ನು ಗದುಗಿನ ಶಿವಾನಂದ ಮಠದ ಜಗದ್ಗುರು ಸದಾಶಿವಾನಂದ ಶ್ರೀಗಳು ವಹಿಸಲಿದ್ದಾರೆ ಸಂಜೆ ೬:೦೦ಗೆ ರಥೋತ್ಸವ ಜರುಗಲಿದೆ.
ಮಾರ್ಚ್೭ ರಂದು ಶನಿವಾರಯಥಾಪ್ರಕಾರ ಧಾರ್ಮಿಕ ವಿಧಿ ವಿಧಾನಗಳು ಪೂಜಾ ಪುನ
ಸ್ಕಾರಗಳು ನಂತರ ೧೨:೩೦ಕ್ಕೆ ಮಹಾಪ್ರಸಾದ ಮತ್ತು ಸಾಯಂಕಾಲ ಮಂಗಳಾರತಿ ಭಜನೆ ಮುಖಾಂತರ ಮೂರನೇ ದಿನದ ಕಾರ್ಯಕ್ರಮ ಸಂಪನ್ನವಾಗಲಿದೆ ಎಂದು ಶ್ರೀ ಗುರು ಗೋವಿಂದ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.



























