
ಬೀದರ:ಮಾ.೩:
ಯಾದಗಿರಿ ಜಿಲ್ಲೆಯ ಮಹಲ್‌ರೋಜಾ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ದಾಖಲಾಗಿರುವ ಪೋಕ್ಸೊ ಪ್ರಕರಣವನ್ನು ತಕ್ಷಣ ಹಿಂಪಡೆಯುವAತೆ ಬೀದರ ಜಿಲ್ಲಾ ಟೋಕರಿಕೋಳಿ ಸಮಾಜ ಸಂಘ ಒತ್ತಾಯಿಸಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಮಾಸ್ಟರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವಂತೆ, ರಾಜ್ಯ ಹಾಗೂ ಅಂತರರಾಜ್ಯಗಳಿAದ ಭಕ್ತರನ್ನು ಹೊಂದಿರುವ ಮಹಲ್‌ರೋಜಾ ಮಠಕ್ಕೆ ಅನೇಕರು ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ. ಇತ್ತೀಚೆಗೆ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ ಆಧರಿಸಿ, ಯಾವುದೇ ಸಮಗ್ರ ತನಿಖೆ ನಡೆಸದೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತವಾಗಿ ಪೋಕ್ಸೊ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಅವರು ಆರೋಪಿಸಿದ್ದಾರೆ.
ಘಟನೆಯ ಸಂದರ್ಭದಲ್ಲಿ ಮಗುವಿನ ಕುಟುಂಬದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರೆಂದು ತಿಳಿಸಿರುವ ಸಂಘ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ತಪ್ಪಾಗಿ ಹರಡಲಾಗಿದ್ದು, ಸಂಬAಧಪಟ್ಟವರಿAದ ಸಮಗ್ರ ವಿಚಾರಣೆ ನಡೆಸಬೇಕಾಗಿತ್ತು ಎಂದು ಹೇಳಿದೆ.
ಸಂಘವು ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದ್ದು, ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ರದ್ದುಪಡಿಸಬೇಕು ಹಾಗೂ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಮಕ್ಕಳ ಹಕ್ಕುಗಳ ಆಯೋಗದ ಕ್ರಮದ ಕುರಿತೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಒಂದು ವೇಳೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಧರಣಿ, ಸತ್ಯಾಗ್ರಹ ಸೇರಿದಂತೆ ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಸುನೀಲ ಖಾಸೆಂಪೂರ, ಹಿರಿಯ ಮುಖಂಡರಾದ ನಂದಕುಮಾರ ಜಂಬಗಿಕರ್, ಅಶೋಕ ಜಮಾದರ, ಬಸವರಾಜ ಖಾಶೆಂಪೂರ, ಸುನೀಲ ಭಾವಿಕಟ್ಟಿ, ಶರಣಪ್ಪ ಖಾಶೆಂಪೂರ, ಅನೀಲ ಐಸಪೂರ, ಪಂಡರಿ ನೇಳಗಿ, ಶಿವಕುಮಾರ ಹಾಲಹಳ್ಳಿ, ರಾಜು ಜಮಾದರ, ಸಂಜುಕುಮಾರ ಸಿರ್ಸೆ, ಚಂದು ಅಲಿಯಂಬರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



























