ಹೋಳಿ ಮತ್ತು ರಂಜಾನ್ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿ: ಸಿ ಪಿ ಐ ಸಂತೋಷ್ ಹಳ್ಳೂರ

ಅಥಣಿ :ಮಾ.೩: ಎಲ್ಲರೂ ಹಿಂದಿನಿAದಲೂ ಶಾಂತಿ ಸೌಹಾರ್ದತೆಯಿಂದ ಎಲ್ಲ ಸಮಾಜದವರು ಸೇರಿ ತಾಲೂಕಿನಲ್ಲಿ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೀರಿ. ಪ್ರತಿ ಬಾರಿಯಂತೆ ಈ ಬಾರಿಯೂ ಹೋಳಿ ಹಾಗೂ ರಮಝಾನ್ ಹಬ್ಬಗಳನ್ನು ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ಸಂತೋಷ ಹಳ್ಳೂರ ಹೇಳಿದರು.
ಅವರು ಇಲ್ಲಿನ ಪೋಲೀಸ್ ಸಮುದಾಯ ಭವನದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರ ಪೂರ್ವಭಾವಿ ಶಾಂತಿ ಸಭೆ ನಡೆಸಿ ಮಾತನಾಡಿದರು. ಹಿಂದೂ-ಮುಸ್ಲಿA ಸೇರಿದಂತೆ ಎಲ್ಲಾ ಧರ್ಮದವರು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಶಾಂತಿ ಸೌಹಾರ್ದತೆ ಮತ್ತು ಸಹಕಾರದಿಂದ ಹೋಳಿ ಹಬ್ಬವನ್ನು ಆಚರಿಸಬೇಕು ಹೋಳಿ ಹಬ್ಬ ಹಾಗೆಯೇ ಮಾ.೨೧ ರಂದು ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದ್ದು. ಈ ಹಬ್ಬಗಳ ಸಮಯದಲ್ಲಿ ಯಾವುದೇ ಆಹಿತಕರ ಘಟನೆ ಜರುಗದಂತೆ ನೋಡಿಕೊಳ್ಳಬೇಕು. ಹಬ್ಬದ ಸಮಯದಲ್ಲಿ ಪರಸ್ಪರ ಧಾರ್ಮಿಕ ಭಾವನೆಗಳನ್ನು ಗೌರವಿಸಲು ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಮುಖಂಡರಿಗೆ ಮನವಿ ಮಾಡಿದರು.
ಆನಂತರ ಪಿಎ??? ಗಿರಿಮಲ್ಲಪ್ಪ ಉಪ್ಪಾರ ಮಾತನಾಡಿ ಸಹೋದರತ್ವ ಮತ್ತು ಸೌಹಾರ್ದತೆಯ ಪ್ರತೀಕವಾದ ಹೋಳಿ ಹಬ್ಬವನ್ನು ಶಾಂತಿಯುತವಾಗಿ, ಪರಸ್ಪರ ಗೌರವದಿಂದ ಹಬ್ಬ ಆಚರಿಸಬೇಕು. ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅವಶ್ಯ. ಸಮಸ್ಯೆಗಳಿದ್ದರೆ ತಕ್ಷಣ ಗಮನಕ್ಕೆ ತನ್ನಿ, ಸರಿಪಡಿಸೋಣ. ಆದಷ್ಟು ರಾಸಾಯನಿಕ ಬಣ್ಣಗಳನ್ನು ತ್ಯಜಿಸಿ. ನಾಲಾ, ಕೆನಾಲ್, ಬಾವಿಯಲ್ಲಿ ಸ್ನಾನ ಮಾಡುವಾಗ ಎಚ್ಚರವಿರಲಿ. ಈಗ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಸಂದರ್ಭ ಇರುವುದರಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅಡಚಣೆ ಆಗದಂತೆ ಹಬ್ಬವನ್ನು ಆಚರಿಸಿ, ಬಡಾವಣೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಹಲಿಗೆ ಬಾರಿಸುವುದಕ್ಕೆ ನಿಯಂತ್ರಣ ಇರಲಿ ಎಂದು ಸಲಹೆ ನೀಡಿದರು.
ಸೂಕ್ಷ್ಮ ಪ್ರದೇಶಗಳಲ್ಲಿ ಪೋಲೀಸರು ಹದ್ದಿನ ಕಣ್ಣಿಡಲಿದ್ದು ಕಾನೂನು ಸುವ್ಯವಸ್ಥೆ ಧಕ್ಕೆ ಬಾರದಂತೆ ಹಬ್ಬ ಆಚರಿಸಬೇಕು. ಹಬ್ಬ ಆಚರಣೆಯ ಕಾಲಕ್ಕೆ ಯಾವುದೇ ರೀತಿಯ ಆಹಿತಕರ ಘಟನೆ ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಪಟ್ಟಣ ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಲ್ಲರೂ ಜಾಗರೂಕತೆಯಿಂದ ಇರಬೇಕು ಎಂದರು.

ಈ ವೇಳೆ ಸಾಮಾಜ ಸೇವಕ ಪ್ರಶಾಂತ ತೋಡಕರ ಮಾತನಾಡಿ ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರ ಇಲ್ಲಿ ಎಲ್ಲ ಸಮಾಜದವರು ಶಾಂತಿ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿದ್ದು ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ ಇಲ್ಲಿ ಎಲ್ಲರೂ ಅಣ್ಣತಮ್ಮಂದಿರAತೆ ಬಾಳ್ವೆ ಮಾಡುತ್ತಿದ್ದಾರೆ. ಒಂದು ವೇಳೆ ಸಣ್ಣ ಮಕ್ಕಳಿಂದ ಯಾವುದೇ ರೀತಿಯ ಸಣ್ಣ ಪುಟ್ಟ ಘಟನೆಗಳು ನಡೆದರೆ ಅದನ್ನು ದೊಡ್ಡದು ಮಾಡದೆ ಸಮಾಜದ ಹಿರಿಯರೆಲ್ಲರೂ ಸೇರಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯವನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಅಯ್ಯಾಜ ಮಾಸ್ಟರ್. ಶಬ್ಬೀರ್ ಸಾತಬಚ್ಚೆ. ಶಶಿ ಸಾಳವೆ. ಮಾತನಾಡಿದರು.
ಈ ಸಂದರ್ಭದಲ್ಲಿ ಅಯಾಜ ಮಾಸ್ಟರ. ಶಬ್ಬೀರ ಸಾತಬಚ್ಚೆ. ಪ್ರಶಾಂತ ತೋಡಕರ. ಬಿರಪ್ಪಾ ಯಂಕಚ್ಚಿ. ಮುರಗೇಶ ಪಟ್ಟಣ. ರೀಯಾಜ ಅತ್ತಾರ. ಇಲಾಯಿ ಸೌದಾಗರ. ಬಾಬಾಜಾನ ಮಕಾಂದರ. ಪೀರೂಜ ಅತ್ತಾರ. ಮಲ್ಲು ಮಾಳಿ. ಸುನಿಲ ನಾಯಿಕ. ಮಹೆಂದ್ರ ಭಜಂತ್ರಿ. ಮುಸ್ತಕಾ ಶೇಖ. ವೀಶಾಲ ಲೋಣಾರೆ. ಪವನ ಕಲೂಳ್ಳಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು