
ಕೋಲಾರ,ಮಾ,೩- ಸ್ವರ್ಣಭೂಮಿ ಸ್ಟಾರ್ ಐಕಾನ್ ಅವಾರ್ಡ್ ೨೦೨೬ನ್ನು ಸಮಾಜ ಸೇವಕ ಹಾಗೂ ಎಂ.ಆರ್.ಎನ್ ಅರ್ಥ್ ಮೂವರ್ಸ್ ಸಂಸ್ಥೆಯ ಮಾಲೀಕ ಅರ್ಜುನ್ ಎಂ.ಎನ್ ಅವರು ಪಡೆದಿರುತ್ತಾರೆ.
ಸ್ವರ್ಣಭೂಮಿ ಪೌಂಡೇಶನ್ ಕರ್ನಾಟಕ, ಅಕ್ಷರ ವಿಜಯ ಕನ್ನಡ ಮಾಸ ಪತ್ರಿಕೆ ಸಹಯೋಗದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಸ್ವರ್ಣಭೂಮಿ ಸ್ಟಾರ್ ಐಕಾನ್ ಅವಾರ್ಡ್ ೨೦೨೬ರ ವಿತರಣಾ ಕಾರ್ಯಕ್ರಮದಲ್ಲಿ ಅರ್ಜುನ್ ಎಂ.ಎನ್ ಅವರಿಗೆ ಅವಾರ್ಡ್ ನೀಡಿ ಗೌರವಿಸಲಾಯಿತು.
ಈ ವೇಳೆ ಸ್ವರ್ಣಭೂಮಿ ಪೌಂಡೇಶನ್ ಅಧ್ಯಕ್ಷ ಬಿ.ಶಿವಕುಮಾರ್, ಅಕ್ಷರವಿಜಯ ಕನ್ನಡ ಮಾಸ ಪತ್ರಿಕೆ ಪ್ರಧಾನ ಸಂಪಾದಕ ಡಾ. ಪೋಸ್ಟ್ ನಾರಾಯಣಸ್ವಾಮಿ, ಇಂಚರ ನಾರಾಯಣಸ್ವಾಮಿ ಇತರರು ಇದ್ದರು.





























