ರಸ್ತೆ ಅಭಿವೃದ್ಧಿ ವಿಳಂಬ ಖಂಡಿಸಿ ಅಜ್ಜಾವರದಲ್ಲಿ ಚುನಾವಣೆ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಸುಳ್ಯ:ರಸ್ತೆ ಅಭಿವೃದ್ಧಿ ಮಾಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಚುನಾವಣೆ ಬಹಿಷ್ಕಾರ ಬ್ಯಾನರ್ ಅಳವಡಿಸಲಾಗಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ.
ಅಜ್ಜಾವರ ಗ್ರಾಮದ ಶಿರಾಜೆ ೨ನೇ ವಾರ್ಡ್‌ನ ಅಡ್ಡರಸ್ತೆಯಿಂದ ಬೇಲ್ಯ ೪ನೇ ವಾರ್ಡ್‌ನ ಬೀನಡ್ಕದವರೆಗೆ ಸುಮಾರು ೩.ಕಿ.ಮೀ. ರಸ್ತೆ ಡಾಮರೀಕರಣ ಮಾಡಲು ವಿಳಂಬ ಧೋರಣೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಜ್ಜಾವರ ಗ್ರಾಮದ ಶಿರಾಜೆ ೨ನೇ ವಾರ್ಡ್‌ನ ಅಡ್ಡರಸ್ತೆಯಿಂದ ಬೇಲ್ಯ ೪ನೇ ವಾರ್ಡ್‌ನ ಬೀನಡ್ಕದವರೆಗೆ ಸುಮಾರು ೩.ಕಿ.ಮೀ. ರಸ್ತೆ ಡಾಮರೀಕರಣಕ್ಕೆ ೪೦ ವರ್ಷಗಳಿಂದ ಅನೇಕ ಬಾರಿ ಬೇಡಿಕೆ ಇಟ್ಟಿದ್ದು ಹಾಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ದೊರಕದೇ ಇದ್ದು, ಯಾವುದೇ ಮನವಿಗೆ ಸ್ಪಂದಿಸದೆ ಸುಳ್ಳು ಆಶ್ವಾಸನೆಯನ್ನು ನೀಡುತ್ತಾ ಬಂದು ಮತದಾನ ಯಾಚಿಸುವ ರಾಜಕಾರಣಿಗಳಿಗೆ ?ಕ್ಕಾರ. ಇದೇ ರೀತಿ ನಮ್ಮನ್ನು ಕಡೆಗಣಿಸಿದ್ದೇ ಆದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಸೌಲಭ್ಯ ವಂಚಿತ ಶಿರಾಜೆ, ಬೇಲ್ಯ ಬೀನಡ್ಕ ನಾಗರೀಕರು ಎಂಬ ಬ್ಯಾನರ್ ಅಳವಡಿಸಲಾಗಿದೆ.