ಇಂದಿನ ವಿದ್ಯಾರ್ಥಿ ಮುಂದಿನ ಭಾವಿ ಭಾರತೀಯ ಪ್ರಜೆ: ಬಸವರಾಜ ಪಾಟೀಲ್ ನರಿಬೋಳ

ಜೇವರ್ಗಿ,ಮಾ.2-ಇಂದಿನ ವಿದ್ಯಾರ್ಥಿ ಮುಂದಿನ ಭಾವಿ ಭಾರತೀಯ ಉತ್ತಮ ಪ್ರಜೆ ಎಂದು ಡಿಸಿಸಿ ಬ್ಯಾಂಕ ನಿರ್ದೇಶಕ ಬಸವರಾಜ್ ಪಾಟೀಲ್ ನರಿಬೋಳ ಹೇಳಿದರು.
ತಾಲೂಕಿನ ಕೋಳಕೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ 8ನೇ ತರಗಿತಿಯ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭ ಮತ್ತು ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿಗಳಾದ ಎಸ್.ಟಿ.ಬಿರಾದಾರ, ತಾರಾಸಿಂಗ ರಾಠೋಡ ಆಗಮಿಸಿದ್ದರು. ಎಸ್‍ಡಿಎಂಸಿ ಅಧ್ಯಕ್ಷರಾದ ಶ್ರೀಶೈಲ ಬಿ ದೊಡ್ಮನಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ವಿದ್ಯಾರ್ಥಿಗಳಾದ ನಿಂಗಮ್ಮ ಹಾಗೂ ಸಂಗಡಿಗರಿಂದ ಸ್ವಾಗತ ಗೀತೆಯನ್ನು ಹಾಡಿದರು. ಮಾಜಿ ಸೈನಿಕ ಅದಪ್ಪ ಸಾಹು ಸಿಖೇದ ಅವರು ಶಾಲಾ ಅಭಿವೃದ್ಧಿಯ ಕುರಿತಾಗಿ ಮಾತನಾಡಿದವರು. ಅತ್ಯುತ್ತಮ ಎಸ್‍ಡಿಎಂಸಿ ಹೊಂದಿದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಕೇಂದ್ರ ಸರಕಾರದಲ್ಲಿ ಗುರುತಿಸಿಕೊಂಡ ಶಾಲಾ ಆಡಳಿತ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ನಮ್ಮ ಶಾಲೆಯಿಂದ 2025-26ನೇ ಸಾಲಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ 400 ಮೀಟರ ಓಟದ ಸ್ಪರ್ಧೆಯಲ್ಲಿ ತಾಲೂಕಾ ಮಟ್ಟದಲ್ಲಿ ಭಾಗವಹಿದ 6ನೇ ವಿದ್ಯಾರ್ಥಿನಿ ಕುಮಾರಿ ಭಸ್ಮಾoಬಿಕೆ ಬಿ ಕಟ್ಟಿ ಮತ್ತು 100 ಮೀಟರ ಓಟಿದ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಭಾಗವಿಸಿದ ವಿದ್ಯಾರ್ಥಿನಿ ಕುಮಾರಿ ನಿಂಗಮ್ಮ ಎಸ್ ದೊಡ್ಮನಿ ಹಾಗೂ ತಾಲೂಕಾ ಮಟ್ಟದ ಸೇವಾರತ್ನ ಪ್ರಶಸ್ತಿಗೆ ಪಡೆದುಕೊಂಡ ಲಲಿತಾಬಾಯಿ ಹಂಗರಗಿ ಸನ್ಮಾನಿಸಲಾಯಿತು. ಭೀಮಾಶಂಕರ ರದ್ದೇವಾಡಗಿ ವಿದ್ಯರ್ಥಿಗಳಿಂದ ಆಯೋಜಿಸಲ್ಪಟ್ಟ ಸಾಂಸ್ಕøತಿಕ ಕಾರ್ಯಕ್ರಮಗನ್ನು ನಡೆಸಿದರು ನಿರೂಪಣೆಯನ್ನು ಚಂದ್ರಾಮ ಎಸ್ ನಾಯ್ಕೋಡಿ ನಡೆಸಿಕೊಟ್ಟರು.