ದ್ರೋಣ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳು ಕಿತ್ತೂರು ಸೈನಿಕ ಶಾಲೆಗೆ ಆಯ್ಕೆ

ಜೇವರ್ಗಿ,ಮಾ.2-ಪಟ್ಟಣದ ಪ್ರತಿಷ್ಠಿತ ದ್ರೋಣ ಕೋಚಿಂಗ್ ಸೆಂಟರ್‍ನ ವಿದ್ಯಾರ್ಥಿಗಳು ಕಿತ್ತೂರು ರಾಣಿ ಚನ್ನಮ್ಮ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ.
ಫೆಬ್ರವರಿ 1ರಂದು ನಡೆದ ಪ್ರವೇಶ ಪರೀಕ್ಷೆಯಲ್ಲಿ ಈ ಸಂಸ್ಥೆ ಯ ವಿದ್ಯಾರ್ಥಿಗಳಾದ ಅನ್ನಪೂರ್ಣ ಪಂಚಯ್ಯ ಹಿರೇಮಠ್, ಗೌತಮಿ ಸುನೀಲ್ ಚನ್ನೂರ,ಸೌಜನ್ಯ ಅಮೀನಪ್ಪ ಹೋಸಮನಿ ರೇಣುಕಾ ಹಣಮಂತ ಶಾಬಾದಿ ಎಂಬ ನಾಲ್ವರು ವಿದ್ಯಾರ್ಥಿನಿಯರು ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ.
ಜೇವರ್ಗಿ ಪಟ್ಟಣದ ಶಾಂತನಗರದಲ್ಲಿರುವ ಈ ದ್ರೋಣ ಕೋಚಿಂಗ್ ಸೆಂಟರನ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಶರಣು ಬಿಲ್ಲಾರ ಹಾಗೂ ಸಮಸ್ತ ಶಿಕ್ಷಕ ಸಿಬ್ಬಂದಿವಗ9ದವರು ಶುಭಹಾರೈಸಿದ್ದಾರೆ ಪೆÇೀಷಕರು ಹಾಗೂ ಪಟ್ಟಣದ ಗಣ್ಯರು ವಿದ್ಯಾರ್ಥಿನಿಯರ ಈ ಸಾಧನೆಗೆ ಶ್ಲಾಘಿಸಿದ್ದಾರೆ.