ವಿದ್ಯುತ ಶಾರ್ಟ್ ಸರ್ಕಿಟ್‍ನಿಂದ ಮನೆ ಭಸ್ಮ: ಡಾ.ಫಾರುಕ್ ಮಣ್ಣೂರ ನೆರವು

ಚಿಂಚೋಳಿ,ಮಾ.2-ಇತ್ತೀಚೆಗೆ ವಿದ್ಯುತ ಶಾರ್ಟ್ ಸರ್ಕಿಟ್‍ನಿಂದ ಸೈಯದ ಇಬ್ರಾಹಿಂ ಎಂಬುವವರಿಗೆ ಸೇರಿದ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಬಡ ಕುಟುಂಬ ತುಂಬ ಕಷ್ಟದಲ್ಲಿರುವುದನ್ನು ಅರಿತು ಕಲಬುರಗಿಯ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಮಾಜ ಸೇವಕ ಡಾ.ಫಾರುಕ್ ಮಣ್ಣೂರ ಭೇಟಿ ನೀಡಿ ವೈಯಕ್ತಿಕ ಧನ ಸಹಾಯ ಮಾಡಿದರು.
ಚಿಂಚೋಳಿ ತಾಲೂಕಿನ ಪೆÇೀಲಕಪಲ್ಲಿ ಗ್ರಾಮದಲ್ಲಿ ಸೈಯದ ಇಬ್ರಾಹಿಂ ಎಂಬುವವರಿಗೆ ಸೇರಿದ ಮನೆ ಸಂಪೂರ್ಣವಾಗಿ ಸುಟ್ಟುಹೊಗಿದ್ದು ಮನೆಯಲ್ಲಿರುವ ಒಡವೆ, ಬಟ್ಟೆ, ಮನೆ ಸಮಾಗ್ರಿ, ದಿನಸಿಗಳು ಸೇರಿದಂತೆ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಬಡ ಕುಟುಂಬ ತುಂಬಾ ಕಷ್ಟದಲ್ಲಿರುವುದನ್ನು ಅರಿತು ಪೆÇೀಲಕಪಲ್ಲಿ ಗ್ರಾಮದ ಸೈಯದ ಇಬ್ರಾಹಿಂ ಅವರ ಮನೆಗೆ ಭೇಟಿ ನೀಡಿ ಮನೆ ಪರಿಶಿಲಿಸಿ ವಯಕ್ತಿಕ ಧನ ಸಮಾಯಮಾಡಿದರು.
ನಿಮ್ಮ ಸುತ್ತಮುತ್ತಲು ಯಾರೆ ಕಷ್ಟದಲ್ಲಿದರೆ ಸಹಾಯಕ್ಕೆ ಪ್ರತಿಯೊಬ್ಬರು ತಮ್ಮಿಂದ ಆದಷ್ಟು ಸಹಾಯಮಾಡುವುದರ ಮೂಲಕ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಚಿಂಚೋಳಿಯ ಪುರಸಭೆ ಮಾಜಿ ಅಧ್ಯಕ್ಷರಾದ ಅಬ್ದುಲ್ ಬಾಷಿದ, ಚಿಂಚೋಳಿಯ ಪುರಸಭೆ ಮಾಜಿ ಉಪಾಧ್ಯಕ್ಷರಾದ ಶಬಿರ ಮಿಯ್ಯಾ, ಚಿಂಚೋಳಿಯ ಪಟ್ಟಣ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಎಂ ಬಾರಿ, ಅಬ್ದುಲ್ ಹಫಿಜ್, ಸೈಯದ ಜಾಕೀರ್ ಸಾಬ್, ಪ್ರದೀಪ ದೇಶಮುಖ್, ಸಂಜೀವಕುಮಾರ ಪಾಟೀಲ್, ಬುರಾನ್ ಪಟೇಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು