ಕಲಬುರಗಿ: 2024-25 ಹಾಗೂ 2025-26ನೇ ಸಾಲಿನ ಬಾಕಿ ಇರುವ ಬೆಳೆವಿಮೆ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ (ಕಲಬುರಗಿ) ವತಿಯಿಂದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮುಂದೆ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು. ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡಿಯಾಳ್, ಮಹೇಶ್ ಎಸ್.ಬಿ., ರಮೇಶ ರಾಗಿ, ಉಮಾಪತಿ ಮಾಲಿಪಾಟೀಲ, ಅರ್ಜುನ್ ಗೊಬ್ಬೂರ್, ಮೌಲಾ ಮುಲ್ಲಾ, ಎಸ್.ಆರ್.ಕೊಲ್ಲೂರ್ ಸೇರಿದಂತೆ ಮತ್ತಿತರರು ಇದ್ದರು.