ದಾಳಿ ಪ್ರತಿ ದಾಳಿ ಮಧ್ಯಪ್ರಾಚ್ಯ ತತ್ತರ

ಟೆಲ್ ಅವಿವ್/ಬೈರೂತ್, ಮಾ,೨- ಆಪರೇಷನ್ ‘ರೋರಿಂಗ್ ಲಯನ್’ ಭಾಗವಾಗಿ ಇಸ್ರೇಲ್ ರಕ್ಷಣಾ ಪಡೆಗಳು ನಡೆಸುತ್ತಿರುವ ದಾಳಿಯನ್ನು ಮತ್ತಷ್ಟು ತೀವ್ರಗೊಂಡಿದ್ದು ದಾಳಿಯಲ್ಲಿ ಇರಾನಿನ ಕನಿಷ್ಠ ೩೧ ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಗೆ ತಿರುಗೇಟು ನೀಡಿರುವ ಇರಾನ್ ನಡೆಸಿದ ಪ್ರತಿ ದಾಳಿಯಲ್ಲಿ ೯ ಮಂದಿ ಮೃತಪಟ್ಟಿದ್ದಾರೆ.

ಇರಾನ್ ಬೆಂಬಲಿತ ಹಿಜ್ಜುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು ಸಾವು ನೋವಿನ ಸಂಖ್ಯೆ ಮತ್ತಷ್ಡು ಹೆಚ್ಚುವ ಸಾದ್ಯತೆಗಳಿವೆ ಎನ್ನಲಾಗಿದೆ.

ಹಿಜ್ಜುಲ್ಲಾ ನಡೆಸಿದ ಕ್ಷಿಪಣಿ ಮತ್ತು ಗುಂಡಿನ ದಾಳಿಗೆ ಪ್ರತಿಯಾಗಿ ಇಸ್ರೇಲ್ ಕೂಡ ಕ್ಷಿಪಣಿ ಮಳೆಗರೆದಿದೆ. ಹಿಜ್ಜುಲ್ಲಾ ನೆಲೆಗಳ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು ನಡೆಸಿದ ದಾಳಿಯಲ್ಲಿ ೩೧ ಮಂದಿ ಸಾವನ್ನಪ್ಪಿದ್ದಾರೆ.

ಇಸ್ರೇಲ್ ಪಡೆಗಳು ಲೆಬನಾನ್ ರಾಜ್ಯವನ್ನ ನಾಶಪಡಿಸುತ್ತಿವೆ. ಯಾವುದೇ ಬೆದರಿಕೆಗಳನ್ನ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಇಸ್ರೇಲ್ ಹೇಳಿದೆ.

ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಆಲಿ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ನಾಗರಿಕರನ್ನ ಗುರಿಯಾಗಿಸಿ ಹಿಬ್ಬುಲ್ಲಾ ಮಿಸೈಲ್ ಮತ್ತು ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಆಪರೇಷನ್ ’ ’ ಪ್ರಾರಂಭಿಸಿ ಲೆಬನಾನ್ ಸುತ್ತ ದಾಳಿ ನಡೆಸುತ್ತಿದೆ.


ನಾಗರಿಕರಿಗೆ ಎಚ್ಚರಿಕೆ


ದಾಳಿ ನಡೆಸುವುದಕ್ಕೆ ಮುನ್ನವೇ ಇಸ್ರೇಲ್ ಲೆಬನಾನ್ ನಾಗರಿಕರಿಗೆ ಎಚ್ಚರಿಕೆ ರವಾನಿಸಿತ್ತು. ಪೂರ್ವ ಮತ್ತು ದಕ್ಷಿಣ ಲೆಬನಾನ್‌ನ ಸುಮಾರು ೫೦ ಹಳ್ಳಿಗಳ ಜನರನ್ನ ಸ್ಥಳಾಂತರಿಸುವಂತೆ ಇಸ್ರೇಲಿ ಸೇನೆ ಒತ್ತಾಯಿಸಿತ್ತು.

ನಾಗರಿಕರು ತಮ್ಮ ಮನೆಗಳನ್ನ ತೆರವುಗೊಳಿಸಿ ಹಳ್ಳಿಗಳಿಂದ ಕನಿಷ್ಠ ೧,೦೦೦ ಮೀಟರ್ ದೂರದಲ್ಲಿರುವ ಸ್ಥಳಾಂತರಗೊಳ್ಳುವಂತೆ ಹೇಳಿತ್ತು ಎಂದು ಇಸ್ರೇಲ್ ಸೇನೆ ತಿಳಿಸಿದೆ.

೯ ಸಾವು, ೨೩ ಮಂದಿಗೆ ಗಾಯ


ಅಮೆರಿಕ ಹಾಗೂ ಇಸ್ರೇಲ್ ತನ್ನ ಮೇಲೆ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್ ದಾಳಿ ನಡೆಸಿದ್ದು ೯ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ೨೩ ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಇಸ್ರೇಲ್ ಕೇಂದ್ರ ಭಾಗದ ನಗರ ಬೆಟ್ ಶೆಮೆಷ್ ಮೇಲೆ ಇರಾನ್ ನಡೆಸಿದ ಕ್ಷಿಪಣಿಗಳ ದಾಳಿಯಲ್ಲಿ ಕನಿಷ್ಠ ೯ ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

‘ಇರಾನ್ ಉಡಾಯಿಸಿದ ಕ್ಷಿಪಣಿಯೊಂದು ನಗರದ ಕಟ್ಟಡಕ್ಕೆ ಅಪ್ಪಳಿಸಿದೆ. ಈ ದಾಳಿಯಲ್ಲಿ, ೯ ಜನರು ಸಾವಿಗೀಡಾಗಿ ೨೩ ಮಂದಿ ಗಾಯಗೊಂಡಿದ್ದಾರೆ’ ಎಂದು ತುರ್ತು ಸೇವೆ ಒದಗಿಸುವ ಸಂಸ್ಥೆ ಎಂಡಿಎ ಹೇಳಿದೆ.

ಕೊಲ್ಲಿ ರಾಷ್ಟ್ರಗಳ ವಿವಿಧ ನಗರಗಳನ್ನು ಗುರಿಯಾಗಿಸಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಿದೆ. ರಿಯಾದ್, ದುಬೈ, ಅಬುಧಾಬಿ, ದೋಹಾ, ಮನಾಮ, ಇಸ್ರೇಲ್‌ನ ಟೆಲ್ ಅವೀವ್ ಹಾಗೂ ಜೆರುಸಲೇಮ್ ನಗರಗಳ ಮೇಲೆ ಕ್ಷಿಪಣಿಗಳಿಂದ ದಾಳಿ ನಡೆಸಿದೆ.

ಕೊಲ್ಲಿ ಹಾಗೂ ಇರಾಕ್‌ನ ಕುರ್ದಿಸ್ತಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದಾಗಿ ಇರಾನ್ ಸೇನೆ ಹೇಳಿದೆ.

ಅಣ್ವಸ್ತ್ರ ಕಾರ್ಯಕ್ರಮ ವಿವಾದಕ್ಕೆ ಸಂಬಂಧಿಸಿ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗೆ ಒಮಾನ್ ಮಧ್ಯಸ್ಥಿಕೆ ವಹಿಸಿತ್ತು.ಪ್ರತಿದಾಳಿ ವೇಳೆ ಒಮಾನ್‌ಅನ್ನು ಕೂಡ ಇರಾನ್ ಪಡೆಗಳು ಗುರಿಯಾಗಿಸಿದ್ದವು.ಮತ್ತೆ ನಡೆದ ದಾಳಿಯಲ್ಲಿ ಒಮಾನ್‌ನ ದುಕಮ್ ಬಂದರು ಗುರಿಯಾಗಿಸಿ ಎರಡು ಡೋನ್‌ಗಳಿಂದ ದಾಳಿ ನಡೆಸಿತು. ಈ ಘಟನೆಯಲ್ಲಿ ಒಬ್ಬ ವಿದೇಶಿ ಕಾರ್ಮಿಕ ಮೃತಪಟ್ಟಿದ್ದಾಗಿ ಒಮಾನ್ ಸುದ್ದಿಸಂಸ್ಥೆ ವರದಿ ಮಾಡಿದೆ.


೪೩ ಸೈನಿಕರ ಸಾವು;


ಇರಾಕ್ ಗಡಿಗೆ ಹೊಂದಿಕೊಂಡ, ಇರಾನ್‌ನ ಮೆಹ್ರಾನ್ ನಗರದಲ್ಲಿರುವ ಗಡಿ ಭದ್ರತಾ ಪಡೆಯ ಕೇಂದ್ರ ಕಚೇರಿ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ೪೩ ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.


ಇಸ್ರೇಲ್ ಅನ್ನು ಗುರಿಯಾಗಿಸಿ ಎರಡು ಡ್ರೋನ್‌ಗಳಿಂದ ದಾಳಿ ನಡೆಸಿತು. ಈ ಘಟನೆಯಲ್ಲಿ ಒಬ್ಬ ವಿದೇಶಿ ಕಾರ್ಮಿಕ ಮೃತಪಟ್ಟಿದ್ದಾಗಿ ಒಮಾನ್ ಸುದ್ದಿಸಂಸ್ಥೆ ವರದಿ ಮಾಡಿದೆ.


ಶೋಕ-ಸಂಭ್ರಮ:


ಆಯತೊಲ್ಲಾ ಆಲಿ ಖಮೇನಿ ಅವರ ಹತ್ಯೆಗೆ ಇರಾನ್‌ನಲ್ಲಿ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಹತ್ಯೆ ಸುದ್ದಿ ತಿಳಿಯುತ್ತಲೇ, ಟೆಹರಾನ್‌ನಲ್ಲಿ ಕೆಲವೆಡೆ ಜನರು ಗುಂಪಾಗಿ ಜಮಾಯಿಸಿ, ಶೋಕ ವ್ಯಕ್ತ ಪಡಿಸಿದರು. ತಮ್ಮ ನಾಯಕನ ಹತ್ಯೆಗೆ ರೋಧಿಸಿದರು. ಟೆಹರಾನ್‌ನ ಕೆಲವಡೆ ಜನರು ಬೀದಿಗಳಿದು ಸಂಭ್ರಮಿಸಿದರು

ಅಮೆರಿಕದ ೫೬೦ ಸೈನಿಕರ ಸಾವು


ಅಮೆರಿಕದ ವಿರುದ್ಧ ಪ್ರತೀದಾಳಿ ನಡೆಸಿ ಅದರ ಮಿಲಿಟರಿ ನೆಲೆಗಳ ಮೇಲೆ ಎರಡು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿಲಾಗಿದೆ. ದಾಳಿಗೆ ಅಮೆರಿಕದ ೫೬೦ ಸೈನಿಕರು ಹತ್ಯೆಯಾಗಿದ್ದಾರೆ ಎಂದು ಇರಾನ್ ಹೇಳಿಗೊಂಡಿದೆ.


೫೦೦ಕ್ಕೂ ಅಧಿಕ ಅಮೆರಿಕ ಸೈನಿಕರನ್ನು ಕೊಂದಿರುವುದಾಗಿ ಇರಾನ್ ಹೇಳಿಕೊಂಡಿದೆ. ಕುವೈತ್‌ನಲ್ಲಿರುವ ಅಮೆರಿಕ ನೆಲೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಬಹ್ರೇನ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ಡ್ರೋನ್ ದಾಳಿಯಲ್ಲಿ ಭಾರಿ ಹಾನಿಯಾಗಿದೆ. ಅಮೆರಿಕದ ವಿಮಾನವಾಹಕ ನೌಕೆ ಅಬ್ರಹಾಂ ಲಿಂಕನ್ ಮೇಲೆ ನಾಲ್ಕು ಕ್ಷಿಪಣಿಗಳ ದಾಳಿ ನಡೆಸಲಾಯಿತು. ಎಲ್ಲ ದಾಳಿಗಳಲ್ಲಿ ಅಮೆರಿಕದ ೫೬೦ ಮಂದಿ ಸೈನಿಕರು ಸಾವಿಗೀಡಾಗಿದ್ದಾರೆಂದು ಇರಾನ್ ತಿಳಿಸಿದೆ.