ಬಿಐಎಲ್‌ನಲ್ಲಿ ೧೦ ವಿಮಾನಗಳ ಹಾರಾಟ ರದ್ದು

ಬೆಂಗಳೂರು,ಮಾ.೨-ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದ್ದು, ಇಂದು ಬೆಂಗಳೂರಿನಿಂದ ಹೊರಡುವ ೧೦ ವಿಮಾನಗಳನ್ನು ರದ್ದುಪಡಿಸಲಾಗಿದೆ.
ಯುದ್ಧದ ಕಾರಣ ವಾಯುನೆಲೆ ಮುಚ್ಚಿರುವುದರಿಂದ ಇಂದು ವಿಮಾನಗಳನ್ನು ರದ್ದುಪಡಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಹೊರಡುವ ಮತ್ತು ಬರುವ ವಿಮಾನಗಳು ರದ್ದುಗೊಂಡಿವೆ.


ಯುದ್ಧದ ಕಾರಣ ಇಂದು ಒಟ್ಟು ೨೨ ವಿಮಾನಗಳನ್ನು ರದ್ದುಪಡಿಸಲಾಗಿದೆ. ಬೆಂಗಳೂರಿನಿಂದ ಹೊರಡುವ ೧೦ ವಿಮಾನಗಳು ಮತ್ತು ಬರುವ ೧೨ ವಿಮಾನಗಳನ್ನು ರದ್ದುಪಡಿಸಲಾಗಿದೆ. ಅಬುಧಾಬಿ, ಜೆಡ್ಡಾ, ದೋಹಾ, ದುಬೈ, ಬಹ್ರೇನ್ ನಿಂದ ಬರುವ ವಿಮಾನಯಾನ ಸಂಸ್ಥೆಗಳು ರದ್ದುಗೊಂಡಿವೆ. ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ, ಕತಾರ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸಿವೆ.


ಟಿಕೆಟ್ ಬುಕ್ ಮಾಡಿದವರಿಗೆ ರದ್ದಾದ ವಿಮಾನಯಾನ ಸಂಸ್ಥೆಗಳು ಪರ್ಯಾಯ ವ್ಯವಸ್ಥೆಗಳನ್ನು ಮಾಡಿವೆ. ಟಿಕೆಟ್‌ಗಳನ್ನು ಮರು ನಿಗದಿಪಡಿಸಲು ಅಥವಾ ಮರುಪಾವತಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಯುದ್ಧ ಆರಂಭದಿಂದಲೂ, ವಿಮಾನಯಾನ ಸಿಬ್ಬಂದಿ ಟಿಕೆಟ್ ಬುಕ್ ಮಾಡಿದವರಿಗೆ ಮಾಹಿತಿ ನೀಡುತ್ತಿದ್ದಾರೆ.

ದೃಢಪಡಿಸಿದ ವಿಮಾನವಿಲ್ಲದೆ ವಿಮಾನ ನಿಲ್ದಾಣಕ್ಕೆ ಬರದಂತೆ ವಿಮಾನ ನಿಲ್ದಾಣ ಆಡಳಿತ ಮಂಡಳಿಯು ಸಾಮಾಜಿಕ ಮಾಧ್ಯಮ ಮತ್ತು ವಿಮಾನ ನಿಲ್ದಾಣದ ಸಹಾಯವಾಣಿಯ ಮೂಲಕ ಪ್ರಯಾಣಿಕರಿಗೆ ಮನವಿ ಮಾಡಿದೆ.