
ಕೋಲಾರ,ಫೆ,೨೪-ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ಟಾಟಾ ಏರೋಸೀಸ್ ಹೆಲಿಕಾಪ್ಟರ್ ಜೋಡಣಾ ಘಟಕದ ಕರೆಂಟ್ (ವಿದ್ಯುತ್) ಕಿತ್ತು ಹಾಕಿತ್ತೀನಿ ಎಂದಿರುವುದು ಕಾಂಗ್ರೆಸ್ ಶಾಸಕರು ಯಾವ ರೀತಿ ಗೂಂಡಾಗಿರಿ ಮಾಡುತ್ತಾರೆಂಬುವುದನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಶಾಸಕ ಕೊತ್ತೂರು ಮಂಜುನಾಥ್ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು ಇದು ಕೋಲಾರ ಶಾಸಕರು ಮಾತ್ರವಲ್ಲ ಇಡೀ ಕಾಂಗ್ರೇಸ್ ಪಕ್ಷದ ಮುಖಂಡರುಗಳ , ಶಾಸಕರುಗಳ ನಡುವಳಿಕೆ ಹಾಗೂ ವರ್ತನೆಗೆ ಸಾಕ್ಷಿಯಾಗಿದೆ. ಇದು ಕೇವಲ ಕೋಲಾರದ ಪ್ರಕರಣ ಮಾತ್ರವಲ್ಲ ಕುದುರೆ ಮುಖದ ಕಬ್ಬಿಣದ ಕೈಗಾರಿಕೆ ಕಿರೋಸೀಯಲ್ ಕಂಪನಿಯ ಚಟುವಟಿಕೆಗಳ ಬಗ್ಗೆಯೊ ರಾಜ್ಯ ಸರ್ಕಾರ ತೊಂದರೆ ಕೊಟ್ಟಿದೆ.ಕಂಪನಿಯ ಏಳ್ಗೆಯನ್ನು ನಾಶ ಪಡೆಸಲು ಮುಂದಾಗಿದೆ ಎಂದರು.
ವಿಎಎಸ್‌ಎಲ್‌ಗೆ ಒಂದು ರೂಪ ಕೊಟ್ಟು ಅಭಿವೃದ್ದಿ ಪಡೆಸಲು ಮುಂದಾಗಿದ್ದರೆ ಅದಕ್ಕೂ ಸಹ ಈಗಾ ಯಾವೂದೇ ರೀತಿ ಐರನ್ ಸಿಗಬಾರದು ಎಂಬ ವಾತವರಣ ಮಾಡಲು ಹೊರಟಿದ್ದಾರೆ. ಇವರಿಗೆ ರಾಜ್ಯದ ಅಭಿವೃದ್ದಿಯಾಗಲಿ, ದೇಶದ ಅಭಿವೃದ್ದಿಯಾಗಲಿ ಬೇಕಾಗಿಲ್ಲ ಚಿಲ್ಲರೆ ರಾಜಕಾರಣ ಮಾಡುವ ಮೂಲಕ ಅಧಿಕಾರವನ್ನು ದುರ್‍ಬಳಿಸಿ ಕೊಳ್ಳುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತ ಪಡೆಸಿದ್ದಾರೆ.





























