
ಸಂಜೆವಾಣಿ ವಾರ್ತೆ
ಹೊಸಪೇಟೆ,ಫೆಬ್ರವರಿ.21(ಕರ್ನಾಟಕವಾರ್ತೆ)ಕಮಲಾಪುರ ಸರ್ಕಾರಿ ಆಸ್ಪತ್ರೆ ಸಮೀಪ ಹಳ್ಳಿ ಕೆರೆ ಹತ್ತಿರ ಕೆಎ.35.ಸಿ.0062 ಮಹಿಂದ್ರ ಬೊಲೇರೋ ವಾಹನದಲ್ಲಿ ಫೆಬ್ರವರಿ 20 ರಂದು 68.51 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಅನಧಿಕೃತವಾಗಿ ಲೋಡ್ ಮಾಡಿಕೊಂಡು ಸಾಗಣೆ ಮಾಡುತ್ತಿದ್ದಾಗ ವಶಪಡಿಸಿಕೊಂಡು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಕ್ಕಿ ಮತ್ತು ವಾಹನ ವಶಪಡಿಸಿಕೊಳ್ಳಲಾಗಿದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ರಿಯಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























