ಗೋಗಿ ಪಿಎಸಿಎಸ್‌ಗೆ ನೂತನ ಸಾರಥ್ಯ : ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಚಿವ ದರ್ಶನಾಪೂರರ ಗೌರವ ಸನ್ಮಾನ

ಯಾದಗಿರಿ :ಫೆ.೨೧: ಗ್ರಾಮೀಣ ಸಹಕಾರ ಚಳವಳಿಗೆ ನೂತನ ಚೈತನ್ಯ ತುಂಬುವ ಹಾದಿಯಲ್ಲಿ, ತಾಲೂಕಿನ ಗೋಗಿ ಗ್ರಾಮದ ಗೋಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ರಾಜ್ಯ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರು ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು.

ಸAಘದ ಅಧ್ಯಕ್ಷರಾಗಿ ಬಸವರಾಜ ಸಿ. ಡೇವಣಗಾಂವ್ ಹಾಗೂ ಉಪಾಧ್ಯಕ್ಷರಾಗಿ ಸೈಯದ್ ನೂರಲಂ ಹುಸೇನಿ ಆಯ್ಕೆಯಾಗಿದ್ದು, ಇವರ ಆಯ್ಕೆ ಸಹಕಾರ ಕ್ಷೇತ್ರದಲ್ಲಿ ಹೊಸ ದಿಕ್ಕು, ದೃಢ ನಾಯಕತ್ವ ಮತ್ತು ಕಾರ್ಯಪಟುತ್ವದ ಸಂಕೇತವೆAದು ಪರಿಗಣಿಸಲಾಗಿದೆ. ರೈತರ ಆರ್ಥಿಕ ಸದೃಢತೆ, ಸಾಲ ಸೌಲಭ್ಯಗಳ ಸುಗಮ ವಿತರಣಾ ವ್ಯವಸ್ಥೆ ಹಾಗೂ ಕೃಷಿ ಅಭಿವೃದ್ಧಿ ಯೋಜನೆಗಳ ಸಮರ್ಥ ಅನುಷ್ಠಾನದಲ್ಲಿ ಸಂಘ ಪ್ರಮುಖ ಪಾತ್ರವಹಿಸಬೇಕೆಂದು ಸಚಿವರು ಕರೆ ನೀಡಿದರು.

ಸಂಘದ ಸರ್ವಸದಸ್ಯರಾದ ಭೀಮರೆಡ್ಡಿ ಮ್ಯಾಕಲ್, ಮಲ್ಲಿಕಾರ್ಜುನ ರೆಡ್ಡಿ ಡೇವಣಗಾಂವ್, ಭೀಮರಾಯ ಮಟೋಳ್ಳಿ, ಮಹಿಪಾಲ್ ರೆಡ್ಡಿ ಮ್ಯಾಕಲರ್, ರುದ್ರಗೌಡ ಮಲಾರ್, ಬಸವರಾಜ ಕೋಡನೋರ್, ಶಾಂತಪ್ಪ ಗುಡಿಮನಿ, ರಾಮಯ್ಯ ಮೇಟ್ಟಿ ಬಾಣತಿಹಾಳ್, ಚಂದ್ರಾಮ ಅಲಗಿ, ದೇವಕ್ಕಮ್ಮ ಮಾವಿನಮರದ್ ಸೇರಿದಂತೆ ಅನೇಕರು ಹಾಜರಿದ್ದು ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಸವರಾಜಪ್ಪ ಗೌಡ ತಂಗಡಿಗಿ (ಮಾಜಿ ಜಿ.ಪಂ ಅಧ್ಯಕ್ಷರು), ಮಾಣಿಕ್ ರೆಡ್ಡಿ ಮಲಾರ್ (ತಾ.ಪಂ ಸದಸ್ಯರು), ಭೀಮರೆಡ್ಡಿ ಪೊಲೀಸ್ ಪಾಟೀಲ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ ಹುಡ್ಡೇದ, ವಿಜಪ್ಪಗೌಡ ಗೋಟಿಗೆನೋರ್, ಪಕೀರಪ್ಪ ಗೌಡ ಗೋನಾಲ್, ಸಿದ್ದಪ್ಪ ಗೌಡ ಮಾಲಿ ಪಾಟೀಲ್, ಮಲ್ಲುಗೌಡ ಗೋನಾಲ್, ವಿನಯ್ ಕುಮಾರ್ ಮಾಲಿ ಪಾಟೀಲ್, ಮಾಜಿ ತಾ.ಪಂ ಅಧ್ಯಕ್ಷರಾದ ಚಂದಪ್ಪ ಸೀತ್ನಿ, ಮಲ್ಲಪ್ಪ ಬೀರನೂರ, ಮೋನಪ್ಪ ಹೋಸ್ಮನಿ, ಮೋನಪ್ಪ ಬಿ. ಗಡ್ಡದ್, ಮಲ್ಲಿಕಾರ್ಜುನ ಹೋಸ್ಮನಿ, ಮಲ್ಲಪ್ಪ ಮಾವಿನಮರದ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಪ್ಪ ಉಳಂಡಗೇರಿ, ಶೇಖಪ್ಪ ಕತ್ತಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚನ್ನಪ್ಪ ರಾಠೋಡ, ಮರೆಪ್ಪ ಸತ್ಯಂಪೇಟೆ, ಲಕ್ಷ್ಮಣ ಸೀತ್ನಿ, ಚಂದ್ರಶೇಖರ ದೋಡ್ಮನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರಗು ತಂದರು.

ಸನ್ಮಾನ ಸಮಾರಂಭವು ಸಹಕಾರ ಏಕತೆ, ಸಂಘಟಿತ ಶಕ್ತಿ ಹಾಗೂ ಗ್ರಾಮೀಣ ಅಭಿವೃದ್ಧಿಯ ಸಂಕಲ್ಪವನ್ನು ಪ್ರತಿಬಿಂಬಿಸುವ ಸಾರ್ಥಕ ಕ್ಷಣವಾಗಿ ರೂಪುಗೊಂಡಿತು.