ಡ್ರೋನ್ ಮೂಲಕ ಆಗಸದಲ್ಲಿ ಹಂಪಿ ಇತಿಹಾಸ ಸೃಷ್ಟಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಖಾರಿ, ಫೆ.14: ಹಂಪಿ ಉತ್ಸವದ ಉದ್ಘಾಟನೆಯ ನಂತರ ಎಂ.ಪಿ.ಪ್ರಕಾಶ್ ವೇದಿಕೆ ಮುಂಭಾದಲ್ಲಿ ಮೊದಲ ಬಾರಿಗೆ ಆಗಸದಲ್ಲಿ ಡ್ರೋನ್ ಶೋ ಮೂಲಕ ವಿಜಯನಗರದ ಗತವೈಭವವನ್ನು ಅನಾವರಣಗೊಳಿಸಿತು.

.ನೂರಾರು ಡ್ರೋನ್ಗಳು ಕಲ್ಲಿನ ರಥ, ವಿರೂಪಾಕ್ಷ ದೇವಾಲಯ, ಉಗ್ರ ನರಸಿಂಹನ ಮೂರ್ತಿಗಳನ್ನು ಕಲಾತ್ಮಕವಾಗಿ ಬಿಂಬಿಸಿದವು.

ಕನ್ನಡಿಗರ ಹೆಮ್ಮೆಯ ಅರಸ ಶ್ರೀ ಕೃಷ್ಣದೇವರಾಯರ ಭಾವಚಿತ್ರವು ಆಕಾಶದಲ್ಲಿ ಮೂಡಿಬಂದಾಗ ಜನರಿಂದ ಹರ್ಷೋದ್ಗಾರ ವ್ಯಕ್ತವಾಯಿತು. ದರೋಜಿ ಕರಡಿ ಧಾಮ ಮತ್ತು ಬಡವಿ ಲಿಂಗದ ಚಿತ್ರಣಗಳು ಪ್ರದರ್ಶನದ ಮೆರುಗನ್ನು ಹೆಚ್ಚಿಸಿದವು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಜನಪ್ರತಿನಿಧಿಗಳ ಭಾವಚಿತ್ರವನ್ನು ಡ್ರೋನ್ ಮೂಲಕ ಬಾನಂಗಳದಲ್ಲಿ ಮೂಡಿಸಲಾಯ್ತು. ಕೊನೆಯದಾಗಿ ದಿವಂಗತ ನಟ ಪುನೀತ್ ರಾಜಕುಮಾರ್ ಚಿತ್ರವೂ ಮೂಡಿದಾಗ ನೆರೆದವರ ಕೇಕೆ ಮುಗಿಕು ಮುಟ್ಟಿತ್ತು.

ಎ.ಐ.ಆರ್. ಪಿಕ್ಸಲ್ ಕಂಪನಿಯ ತಂತ್ರಜ್ಞರು ದ್ರೋಣ್ಗಳ ಸಂಯೋಜನೆಯ ನಿರ್ವಹಣೆ ಮಾಡಿದರು. ಉತ್ಸವ 3 ದಿನಗಳ ಕಾಲವೂ ದ್ರೋಣ್ ಶೋ ನಡೆಯಲಿದೆ.