ಆಟವಾಡುತ್ತಿದ್ದಾಗ ಚರಂಡಿಗೆ ಬಿದ್ದು ಬಾಲಕ ಸಾವು

ಬೀದರ್,ಫೆ.14-ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕ ಚರಂಡಿಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆನಡೆದಿದೆ.
ಬೀದರ್ ತಾಲೂಕಿನ ಮರ್ಜಾಪುರ (ಎಂ) ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಅವಿನಾಶ್ (5) ಮೃತ ಬಾಲಕ ಎಂದು ತಿಳಿದು ಬಂದಿದೆ.
ಹಬ್ಬದ ನಿಮಿತ್ತ ಅಜ್ಜಿ-ತಾತನ ಮನೆಗೆ ಬಾಲಕ ಆಟ ಆಡುವ ವೇಳೆ ಆಯತಪ್ಪಿ ಚರಂಡಿ ನೀರು ತುಂಬಿದ್ದ ಗುಂಡಿಗೆ ಬಿದ್ದಿದ್ದಾನೆ. ಬಾಲಕ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಪೆÇೀಷಕರು ಹುಡುಕಾಡಿದ್ದಾರೆ.
ಬಳಿಕ ಚರಂಡಿ ನೀರಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.
ಬಗದಲ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.