ಕಲಬುರಗಿ: ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಹಾಗೂ ಬ¯ಗೈ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ನಗರದ ಕನ್ನಡ ಭವನದಲ್ಲಿ ಇಂದು ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಒಳಮೀಸಲಾತಿಯಿಂದ ಆಗುತ್ತಿರುವ ಅನ್ಯಾಯದ ಕುರಿತು ಚಿಂತನ-ಮಂಥನ ಸಭೆ ನಡೆಯಿತು. ಸಿದ್ದಪ್ಪ ಹರಿಜನ, ಎಸ್.ಎಸ್.ತಾವಡೆ, ಎ.ಬಿ.ಹೊಸಮನಿ, ರಮೇಶ ಪಟ್ಟೇದಾರ, ಡಾ.ಸಾಲಿಮನಿ, ಡಾ.ಸಂಗಾ, ಲಾಲಪ್ಪ ಜೋಗನ್, ಹಣಮಂತ ಬೋಧನಕರ್, ಡಾ.ಶಿವಾನಂದ ಕಡಗಂಚಿ, ಡಾ.ಶೇರಿಕಾರ ಭಗವಂತರಾವ, ಉದಯ ಸಾಗರ, ಮಹಾದೇವ ಮೋಘಾ, ಸಂಪತಕುಮಾರ ವಳಕೇರಿ, ಅರುಣ ಭರಣಿ, ಮಹೇಶ ಮದಿನಕರ, ಚಂದ್ರಕಾಂತ ವಾಲಿ, ಪ್ರಭು ಪಟ್ಟಣ ಸೇರಿದಂತೆ ಮತ್ತಿತರರು ಇದ್ದರು.