ಅಮೆರಿಕದಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ನಾಪತ್ತೆ

ಸ್ಯಾನ್ ಪ್ರಾನ್ಸಿಸ್ಕೋ, ಫೆ.೧೪- ಅಮೆರಿಕಾದ ಬರ್ಕ್ಲಿಯ ಕ್ಯಾಲಿಫೊ?ರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಆನ್ವಯಿಕ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಕರ್ನಾಟಕದ ೨೨ ವರ್ಷದ ಭಾರತೀಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (೨೨) ನಾಪತ್ತೆಯಾಗಿರುವ ಘಟನೆ ನಡೆದಿದೆ.

ರೂಮ್‌ಮೇಟ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾಕೇತ್ ಶ್ರೀನಿವಾಸಯ್ಯ ಅವರನ್ನು ಹುಡುಕಿಕೊಡುವಂತೆ ಸ್ನೇಹಿತ
ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬರ್ಕ್ಲಿಯ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ ೨೨ ವರ್ಷದ ಭಾರತೀಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಫೆಬ್ರವರಿ ೯ ರಿಂದ ಕಾಣೆಯಾಗಿದ್ದು ಅವರನ್ನು ಕೊನೆಯ ಬಾರಿಗೆ ಬರ್ಕ್ಲಿ ಬೆಟ್ಟಗಳಲ್ಲಿರುವ ಲೇಕ್ ಅಂಜಾ ಬಳಿ ನೋಡಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಮೇರಿಕಾದ ಕಾನ್ಸುಲೇಟ್ ಜನರಲ್ ಅವರು ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಕುಟುಂಬ ಮತ್ತು ಅವರನ್ನು ಹುಡುಕಲು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.

“ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, ಕರ್ನಾಟಕ ರಾಜ್ಯದವರಾದ ಬರ್ಕ್ಲಿಯ ಭಾರತೀಯ ಸ್ನಾತಕೋತ್ತರ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಕಣ್ಮರೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು ಕಾನ್ಸುಲೇಟ್ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ” ಎಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರೂಮ್‌ಮೇಟ್, ಸಾಕೇತ್ ಶ್ರೀನಿವಾಸಯ್ಯ, ೯ನೇ ತಾರೀಖಿನಿಂದ ಕಾಣೆಯಾಗಿದ್ದಾರೆ, ಕೊನೆಯದಾಗಿ ಬರ್ಕ್ಲಿ ಬೆಟ್ಟಗಳಲ್ಲಿರುವ ಅಂಜಾ ಸರೋವರದ ಬಳಿ ಕಾಣಿಸಿಕೊಂಡಿದ್ದಾರೆ. ಸಂಪರ್ಕದಲ್ಲಿರುವ ಯಾರಾದರೂ ಇತ್ತೀಚೆಗೆ ಅವರನ್ನು ನೋಡಿದ ಪ್ರದೇಶದ ಜನರನ್ನು ತಿಳಿದಿದ್ದರೆ, ದಯವಿಟ್ಟು ಯಾವುದೇ ಮಾಹಿತಿಯೊಂದಿಗೆ ನನ್ನನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.

ಐಐಟಿ-ಮದ್ರಾಸ್‌ನಿಂದ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಪಡೆದರು. ಪ್ರಸ್ತುತ ಅವರು ಯುಸಿ ಬರ್ಕ್ಲಿಯಿಂದ ರಾಸಾಯನಿಕ ಮತ್ತು ಜೈವಿಕ ಆಣ್ವಿಕ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.

ಬರ್ಕ್ಲಿ ಪೊಲೀಸ್ ಇಲಾಖೆಯು ೨೨ ವರ್ಷದ ವ್ಯಕ್ತಿಯನ್ನು ೬ ಅಡಿ ೧ ಇಂಚು ಎತ್ತರ ಮತ್ತು ಸುಮಾರು ೭೩ ಕೆಜಿ ತೂಕ ಹೊಂದಿದ್ದರು ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.