
ಬೆಂಗಳೂರು, ಫೆ. ೧೪ ಕಾಂಗ್ರೆಸ್ ಸರ್ಕಾರ ಸಾವಿರದ ದಿನಗಳಿಗಾಗಿ ಸಂಭ್ರಮಾಚರಣೆ ಮಾಡುತ್ತಿದೆ.
ಆದರೆ ಕನ್ನಡಿಗರ ಪಾಲಿಗೆ:
ಇದು ಸಾವಿರ ದಿನಗಳ ಸರ್ಕಾರ ಅಲ್ಲ, ಸಾವಿರಾರು ಸಮಸ್ಯೆಗಳ ಸರ್ಕಾರ, ಸಾವಿರಾರು ವೈಫಲ್ಯಗಳ ಸರ್ಕಾರ, ಸಾವಿರಾರು ಕೋಟಿ ಭ್ರಷ್ಟಾಚಾರದ ಸರ್ಕಾರ. ಇಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.
ಕರ್ನಾಟಕಕ್ಕೆ, ಕನ್ನಡಿಗರಿಗೆ ಇದು ಸಾವಿನ ಸೂತಕದ ಕರಾಳ ದಿನಗಳು.
ಸರ್ಕಾರಿ ಅಧಿಕಾರಿಗಳ, ನೌಕರರ ಸಾವು, ಆರ್ಸಿಬಿ ಅಭಿಮಾನಿಗಳ ಸಾವು, ಗುತ್ತಿಗೆದಾರರ ಸಾವು , ಅನ್ನದಾತ ರೈತರ ಸಾವು, ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು, ಭ್ರೂಣದಲ್ಲಿ ಹೆಣ್ಣು ಕಂದಮ್ಮಗಳ ಸಾವು, ಅತ್ಯಾಚಾರಕ್ಕೊಳಗಾಗಿ ಬಾಲಕಿಯರ ಸಾವು ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಾಗೆಯೇ ಸಾವಿರಾರು ಸಮಸ್ಯೆಗಳ ಸರ್ಕಾರ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.


























