ಮಾರ್ಚ್ ೧೧ ರಿಂದ ವೈದ್ಯರ ಮುಷ್ಕರ

ಬೆಂಗಳೂರು,ಫೆ. ೧೪- ಮಾರ್ಚ್ ೧೧ ರಿಂದ ರಾಜ್ಯ ವ್ಯಾಪ್ತಿ ಸರ್ಕಾರಿ ಆಸ್ಪತ್ರೆಯ ವೈದ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರು ಇದುವರೆಗೆ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಈ ಹಿನ್ನೆಲೆಯಲ್ಲಿ ಮುಷ್ಕರ ಅನಿವಾರ್ಯ ಅಂತ ವೈದ್ಯರು ಹೇಳಿದ್ದಾರೆ.


ಮಾರ್ಚ್ ೧೧ ರಿಂದ ೧೫ ರವರೆಗೆ ಮೊದಲ ಹಂತದಲ್ಲಿ ಹೊರ ರೋಗಿಗಳ ವಿಭಾಗ( ಓ ಪಿ ಡಿ ) ಬಂದ್ ಮಾಡಿ ಮುಷ್ಕರ ಮಾಡುತ್ತೇವೆ ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಎರಡನೇ ಹಂತದಲ್ಲಿ ಮಾರ್ಚ್ ೧೬ ರಿಂದ ಬೇಡಿಕೆ ಈಡೇರುವ ವರೆಗೆ ಮುಷ್ಕರ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದಾರೆ


ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಆರೋಗ್ಯ ಇಲಾಖೆಯ ನೌಕರರು ಈ ಮುಷ್ಕರದಲ್ಲಿ ಭಾಗವಹಿಸುತ್ತಾರೆ. ಮುಷ್ಕರ ವೇಳೆ ರೋಗಿಗಳಿಗೆ ಎನ್ನದರೂ ತೊಂದರೆ ಅದರೆ ಇದಕ್ಕೆ ನೇರವಾಗಿ ಸರ್ಕಾರ ಹಾಗೂ ಅರೋಗ್ಯ ಮಂತ್ರಿಗಳೆ ಕಾರಣ ನಮ್ಮ ಸಂಘ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿ ಬೇಡಿಕೆ ಈಡೇರಿಕೆಗೆ ಒತ್ತಯ ಮಾಡಿದರು ಇದುವರೆಗೆ ಬೇಡಿಕೆ ಈಡೇರಿಸಿಲ್ಲ..ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಿವಿ ಎಂದು ಸಂಘದ ಅಧ್ಯಕ್ಷ ಡಾ: ರವೀಂದ್ರನಾಥ ಮೇಟಿ ಹೇಳಿದರು


ವೈದ್ಯರ ಪ್ರಮುಖ ಬೇಡಿಕೆಗಳು.

ಸಮರ್ಪಕ ಔಷಧಿ ಪೂರೈಕೆಗೆ ಒತ್ತಾಯ.

ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಬೇಕಾಗಿ ಒತ್ತಾಯ.

  • ಎಲ್ಲಾ ವೃಂದಗಳ ಜೇಷ್ಠತ ಪಟ್ಟಿ ಪ್ರಕಟಿಸುವುದು .
  • ಎಲ್ಲಾ ವೃಂದಗಳ ಮುಂಬಡ್ತಿ .
  • ವರ್ಗಾವಣೆ ಕಾಯ್ದೆಗೆ ಮಾರ್ಪಾಡು.
  • ಸೇವಾ ನಿರತ ನೌಕರರರ ಉನ್ನತ ವ್ಯಾಸಾಂಗ.
  • ಜಿಲ್ಲಾಸ್ಫತ್ರೆ ಸ್ವಾಯತ್ತ ಸಂಸ್ಥೆ ಹುದ್ದೆಗಳು.
  • ಖಾಲಿ ಹುದ್ದೆಗಳ ನೇಮಕಾತಿ.
  • ಎಂಸಿಹೆಚ್ ತಙ್ಞರ ಮರು ಹೊಂದಾಣಿಕೆ.
  • ಗುತ್ತಿಗೆ ವೈದ್ಯರು ಮತ್ತು ನೌಕರರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ.
  • ಕರ್ತವ್ಯ ನಂತರ ಖಾಸಗಿ ವೈದ್ಯಕೀಯ ಸೇವೆಗೆ ಕಡಿವಾಣಕ್ಕೆ ಒತ್ತಾಯ.