ಪೌರಾಯಕ್ತೆಗೆ ಬೆದರಿಕೆ: ರಾಜೀವ್ ಗೌಡ ಬಂಧನಕ್ಮೆ ಖಾಕಿ ಹರಸಾಹಸ

ಚಿಕ್ಕಬಳ್ಳಾಪುರ, ಜ. ೨೪- ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡ ಬಂಧನ ಭೀತಿಯಿಂದ ಪರಾರಿಯಾಗಿ ೧೦ ದಿನಗಳೇ ಕಳೆದಿದ್ದು, ಚಿಕ್ಕಬಳ್ಳಾಪುರ ಪೊಲೀಸರು ರಾಜೀವ್ ಗೌಡರನ್ನ ಬಂಧಿಸಲು ಹರಸಾಹಸ ಪಡುತ್ತಿದ್ದಾರೆ.


ರಾಜೀವ್ ಗೌಡ ಬಂಧನಕ್ಕೆ ಪೊಲೀಸರು ಹಗಲು ರಾತ್ರಿ ಹುಡುಕಾಟ ಮುಂದುವೆರೆಸಿದ್ದು, ತಡ ರಾತ್ರಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದ ಪೊಲೀಸರು, ಬೆಂಗಳೂರಿನ ಸಂಜಯ್ ನಗರದ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.


ಆದರೆ ರಾಜೀವ್ ಗೌಡ ಪತ್ತೆಯಾಗಿಲ್ಲ. ಇನ್ನೂ ರಾಜೀವ್ ಗೌಡ ವಿದೇಶಕ್ಕೆ ಪರಾರಿಯಾಗದಂತೆ ಪಾಸ್ ಪೋರ್ಟ್ ಮೇಲೂ ಸಹ ಪೊಲೀಸರು ಕಣ್ಣಿಟ್ಟಿದ್ದಾರೆ. ಇದರ ನಡುವೆ ಇಂದು ನ್ಯಾಯಾಲಯದಿಂದ ರಾಜೀವ್ ಗೌಡ ಬೇಲ್ ಭವಿಷ್ಯ ಹೊರಬೀಳಲಿದೆ.


ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಮೇಲೆ ಆ?ಯಸಿಡ್ ದಾಳಿ ಆಗಲಿದೆ ಎಂಬ ಬೆದರಿಕೆ ಪತ್ರವೂ ಅಂಚೆ ಮೂಲಕ ನಗರಸಭಾ ಕಚೇರಿಗೆ ಬಂದಿತ್ತು. ಈ ಪತ್ರವನ್ನ ಪಡೆದಿರುವ ಪೊಲೀಸರು ಈಗಾಗಲೇ ಎನ್‌ಸಿಆರ್ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಿಲು ನಿರ್ಧರಿಸಿದ್ದಾರೆ.


ಆಸಿಡ್ ದಾಳಿಯ ಮಾಹಿತಿಯ ಬೆದರಿಕೆ ಪತ್ರದಿಂದ ಎಚ್ಚೆತ್ತಿರುವ ಹಾಗೂ ಕೆಪಿಸಿಸಿ ವತಿಯಿಂದ ರಾಜೀವ್ ಗೌಡ ಅಮಾನತು ಆದ ಕಾರಣ ಅಮೃತಗೌಡ ಮೇಲೆ ದಾಳಿ ಆಗುವ ಸಾಧ್ಯತೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಿಡ್ಲಘಟ್ಟ ನಗರಸಭಾ ಕಚೇರಿ ಸೇರಿದಂತೆ ಪೌರಾಯುಕ್ತೆ ನಿವಾಸದ ಬಳಿಯೂ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ.