ಶುದ್ಧ ಕುಡೀಯುವ ನೀರಿಗಾಗಿ ಪ್ರತಿಭಟನೆಗೆ ಎಚ್ಚೆತ್ತ ಅಧಿಕಾರಿಗಳು /ಯಾದಗಿರ/ಕರ್ನಾಟಕ

ಯಾದಗಿರಿ:ಜ.೧೧:ಸೈದಪೂರ ಹೋಬಳಿಯಲ್ಲಿ ಬರುವ ನೀಲಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡುವಂತೆ ಆಗ್ರಹಿಸಿ ಉಮೇಶ ಕೆ ಮುದ್ನಾಳ ನೇತೃತ್ವದಲ್ಲಿ ಶುದ್ಧಿ ನೀರಿನ ಘಟಕ ಮತ್ತು ಶಿಥಿಲಗೊಂಡ ನೀರಿನ ಟ್ಯಾಂಕ್ ಮುಂಭಾಗದಲ್ಲಿ ನಿಂತು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಬೇಟಿ ನೀಡುತ್ತಿದಂಥೆ ಅಧೀಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ನಂತರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳವರಾದ ಮಹಾದೇವ ಬಬಲಿಗಿ ರವರು ಮಾತನಾಡಿ ತಕ್ಷಣ ನೀರು ಶುದ್ಧಿ ಕರಣ ಘಟಕ ಮತ್ತು ನೀರಿನ ಟ್ಯಾಂಕ್ ಸ್ವಚ್ಚ ಗೊಳಿಸಿ ಪ್ರಾರಂಭ ಮಾಡಿ ತಂಗು ಗುಂಡಿಗಳ ಮರ್ಮ ನಿಂದ ಮುಚ್ಚಿ, ಕಲುಶಿತ ನೀರು ನಿಲ್ಲದಂತೆ ನೋಡಿಕೊಳ್ಳಿ ನಂತರ ಚರಂಡಿ ಸ್ವಚ್ಚ ಮಾಡಿ ಬ್ಲಿಚಿಂಗ್ ಪೌಡರ ಸಿಂಪಡಿಸಿ ಸೊಳ್ಳೆಗಳ ನಿಯಂತ್ರಣ ಮಾಡಿ ಎಂದು ಸ್ಥಳದಲ್ಲಿ ಗ್ರಾ.ಪಂ. ಅಧಿವೃದ್ಧಿ ಅಧಿಕಾರಿ, ಸಿಬ್ಬಂದಿಗಳಿಗೆ ಖಡಕ್ಕಾಗಿ ಸೂಚಸಿದರು.

ಯಾದಗಿರಿ, ತಾಲ್ಲೂಕಿನ ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಗೆ ಬರುವ ನೀಲಹಳ್ಳಿ ಗ್ರಾಮದಲ್ಲಿ ಸ್ವತಂತ್ರ ಸಿಕ್ಕು ಇಲ್ಲಿವರೆಗೆ ಶುದ್ಧ ಕುಡೀಯುವ ನೀರು ಮೂಲಭೂತ ಸೌಕರ್ಯ ಇರದಕಾರಣ ಕೆರಳಿದ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ನೀರು ಶುದ್ಧಿ ಕರಣ ಘಟಕ ಮತ್ತು ಶಿಥಿಲಗೊಂಡ ನೀರಿನ ಟ್ಯಾಂಕನ ಮುಂದೆ ನಿಂತು ಪ್ರತಿಭಟನೆ ನಡೆಸಿದ್ರು.

ಬೆಳ್ಳಂ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ನೀಲಹಳ್ಳಿ ಗ್ರಾಮದ ಅವ್ಯವಸ್ಥೆ ಅರಿತುಕೊಂಡಿರು ಬಳಿಕ ನೀರು ಶುದ್ಧಿ ಕರಣ ಘಟಕ ಮತ್ತು ನೀರಿನ ಟ್ಯಾಂಕ್ ಸೇರಿ ಸಿ.ಸಿ. ರೋಡ, ಚರಂಡಿ, ಕಾಮಗಾರಿ ಮಾಡಲು ಇದನ್ನು ಜನತೆಗೆ ಭವನದಲ್ಲಿ ಶಾಸಕರ ಸಚಿವರ ಸಭೆಗಳು ನಡೆದರೂ ಸಹ ಈ ಸಮಸ್ಯೆ ಕುರಿತು ಗ್ರಾಮಗಳ ಅಭಿವೃದ್ಧಿ ಬಗ್ಗೆ ಏಕೆ ಚರ್ಚೆ ಆಗಲಿಲ್ಲ ಎಂದು ಗರಂ ಆಗಿದ್ರು. ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ತಾಣವಾಗಿದೆ. ಸಮಸ್ಯೆ ಇತ್ಯರ್ಥ ಮಾಡಬೇಕು ಅಂತ ಆಗ್ರಹಿಸಿದ್ರು. ಈ ಬೆನ್ನಲ್ಲೇ ಸ್ಥಳಕ್ಕೆ ಯಾದಗಿರಿ ತಾಲೂಕÀ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮಹಾದೇವ ಬಬಲಿಗಿÀ ಕುಡಿಯುವ ನೀಡು ಮತ್ತು ನೈರ್ಮಲ್ಯ ಇಂಜಿನಿಯರ್, ಗ್ರಾಮ ಪಂಚಾಯತಿ ಕಿಲ್ಲನಕೇರಾ ಪಿಡಿಓ, ಜೆಇ ಹಾಗೂ ಅವರ ಸಿಬ್ಬಂದಿ ವರ್ಗ ನೀಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಅತಿ ಶೀಘ್ರದಲ್ಲೇ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಬರವಸೆ ನೀಡಿದರು.

? ಇದೇ ಸಂದರ್ಬದಲ್ಲಿ ಗ್ರಾಮಸ್ಥರು ಮಹಿಳೆಯರು, ಯುವಕರು ಸೇರಿದಂತೆ ಉಪಸ್ಥಿತರಿದ್ದರು