
ಕಲಬುರಗಿ,ಸೆ.1-ಮಹಿಳೆಯೊಬ್ಬರು ನಕಲಿ ಇನಸ್ಟಾಗ್ರಾಮ್ ಖಾತೆ ತೆರೆದು ಪೊಲೀಸ್ ಕಾನ್ಸಸ್ಟೇಬಲ್‍ಗೆ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
“ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸಾವಿತ್ರಿ ಇನಾಮತಿ ಎಂಬುವವರೆ ನನ್ನ ಹೆಸರಿನಲ್ಲಿ ನಕಲಿ ಇನಸ್ಟಾಗ್ರಾಮ್ ತೆರೆದು ಅದಕ್ಕೆ ತಮ್ಮ ಭಾವಚಿತ್ರ ಸೇರಿಸಿ ಎಡಿಟ್ ಮಾಡಿ ಫೋಸ್ಟ್ ಮಾಡುವುದರ ಜೊತೆಗೆ ಮುಂದೆಯೂ ಕೂಡ ಇದೇ ರೀತಿಯ ಪೋಸ್ಟ್‍ಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಅಫಜಲಪುರ ವೃತ್ತ ನಿರೀಕ್ಷಕರ ಕಚೇರಿಯ ಅಪರಾಧ ವಿಭಾಗದಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿರುವ ಆನಂದ ತಂದೆ ಮಡಿವಾಳಯ್ಯ ಹಿರೇಮಠ (37) ಅವರು ಸಿ.ಇ.ಎನ್.ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.