ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು ಪ್ರತಿಕೃತಿ ದಹನ

ಕಲಬುರಗಿ,ಸೆ.1-ಇಸ್ರೇಲ್ ದೇಶವು ಗಾಜಾಪಟ್ಟಿಯಲ್ಲಿ ಪ್ಯಾಲೇಸ್ತಿನಿಯರ ನರಮೇಧ ಮಾಡುತ್ತಿರುವುದನ್ನು ಖಂಡಿಸಿ ಮತ್ತು ಭಾರತದ ಮೇಲೆ ಶೇ.50 ರಷ್ಟು ಸುಂಕ ಹೇರಿರುವ ಅಮೆರಿಕಾದ ಸಾಮ್ರಾಜ್ಯಶಾಹಿ ನೀತಿಯನ್ನು ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಭಾರತದ ಮೇಲೆ ಶೇ.50 ರಷ್ಟು ಸುಂಕ ಹೇರಿರುವ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಸಾಮ್ರಾಜ್ಯ ಶಾಹಿ ನೀತಿಯನ್ನು ವಿರೋಧಿಸಿ ಮತ್ತು ಇಸ್ರೇಲ್ ದೇಶವು ಗಾಜಾಪಟ್ಟಿಯಲ್ಲಿ ಪ್ಯಾಲೇಸ್ತಿನಿಯರ ನರಮೇಧ ಮಾಡುತ್ತಿರುವುದನ್ನು ಖಂಡಿಸಿ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಪ್ರತಿಕೃತಿ ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಸಜ್ಜನ್, ಗೌರಮ್ಮ ಪಾಟೀಲ, ಖಜಾಂಚಿ ನಾಗಯ್ಯ ಸ್ವಾಮಿ, ಜಾವಿದ್ ಹುಸೇನ್, ಅಲ್ತಾಫ್ ಇನಾಮದಾರ, ಮಹಮೂದ್, ಕಲ್ಯಾಣ ಸಿಂಗೆ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.