ಸಾಹಿತ್ಯ ಅಧ್ಯಯನ ಅಭಿರುಚಿ ಬೆಳೆಸಿಕೊಳ್ಳಿ

ಬೀದರ್: ಅ.25:ಯುವ ಜನರು ಸಾಹಿತ್ಯ ಅಧ್ಯಯನ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ಹೇಳಿದರು.
ನಗರದ ರಾಣಿ ಕಿತ್ತೂರು ಚನ್ನಮ್ಮ ವೃತ್ತದ ಸಮೀಪದ ಕೃಷ್ಣ ದರ್ಶಿನಿ ಹೋಟೆಲ್ ಸಭಾಂಗಣದಲ್ಲಿ ಅಹಿಲ್ಯಾಬಾಯಿ ಹೋಳ್ಕರ್ ಸಾಂಸ್ಕøತಿಕ ಮಹಿಳಾ ಸಂಘದ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಸಾಹಿತ್ಯ ಮತ್ತು ಸಂಸ್ಕøತಿ ಉಪನ್ಯಾಸ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಹಾಗೂ ಸಂಸ್ಕøತಿ ಬಹಳ ಶ್ರೇಷ್ಠವಾಗಿದೆ. ಇದನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಪೆÇ್ರ. ಉಮಾಕಾಂತ ಮೀಸೆ, ಸಾಹಿತಿಗಳಾದ ಸುನೀತಾ ಬಿರಾದಾರ, ಸಿದ್ದಮ್ಮ ಬಸವಣ್ಣನವರ್, ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಮಾತನಾಡಿದರು. ದಾಸ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ಆತ್ಮಾನಂದ ಬಂಬಳಗಿ ವಿಶೇಷ ಉಪನ್ಯಾಸ ನೀಡಿದರು.
ಚಿಲ್ಲರ್ಗಿ ಪಿಕೆಪಿಎಸ್ ನಿರ್ದೇಶಕಿ ಇಂದುಮತಿ ನರಸಪ್ಪ ಜಾಂಪಾಡೆ ಅವರನ್ನು ಸನ್ಮಾನಿಸಲಾಯಿತು.
ಕಲಾವಿದರು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮ ಸಭಿಕರ ಮನ ತಣಿಸಿತು. ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ಭರತನಾಟ್ಯ, ಚನ್ನಬಸವ ಬಿಕ್ಲೆ ವಚನ ಗಾಯನ, ಹಿರಿಯ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ, ರೇವಣಪ್ಪ ಮೂಲಗೆ, ಮನೋಹರ ಹುಪಳಾ ಜನಪದ ಗಾಯನ, ವೇದಿಕ, ವಂಶಿಕ ಚಿಲ್ಲರ್ಗಿ, ಶ್ಲೋಕ, ಭಾಗ್ಯಶ್ರೀ, ಶ್ರೇಯಾ, ಕೃಷ್ಣರಾಜ ಮತ್ತು ಸಾಮ್ರಾಟ್ ಜೋಳದಾಪಕಾ ಸಾಮೂಹಿಕ ನೃತ್ಯ ಪ್ರದರ್ಶಿಸಿದರು.
ಸಂಘದ ಅಧ್ಯಕ್ಷೆ ಕಾಂಚನಾ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿ ಅಶ್ವಿನಿ ಧರಗೊಂಡ ಉಪಸ್ಥಿತರಿದ್ದರು.
ವಿಜಯಕುಮಾರ ಬ್ಯಾಲಹಳ್ಲಿ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು. ಎಂ.ಪಿ. ವೈಜಿನಾಥ ವಂದಿಸಿದರು.