
ವಿಜಯಪುರ, ಜು.17: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ರಾಜ್ಯದ ಚುಕ್ಕಾಣಿಯನ್ನು ರಣದೀಪ್ ಸುರ್ಜೇವಾಲ ಅವರ ಕೈಯಲ್ಲಿ ಕೊಟ್ಟಿದ್ದಾರೆ. ಸೂಪರ್ ಸಿಎಂ ಸುರ್ಜೇವಾಲಾ ಆಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಟೀಕಿಸಿದರು.
ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯಪುರ ಜಿಲ್ಲೆಗೆ ? 4557 ಕೋಟಿ ಅನುದಾನ ಘೋಷಣೆ. ಇದು ಪ್ರಚಾರಕ್ಕೆ ಮಾತ್ರ ಸೀಮಿತವಾಗಿ ಎಂದು ನಿಖಿಲ್ ಕಾಂಗ್ರೆಸ್ ನಾಯಕರ ವಿರುದ್ಧ ಹರಿ ಹಾಯ್ದರು.
ಸಿಎಂ ಮತ್ತು ಡಿಸಿಎಂ ಶಂಕು ಸ್ಥಾಪನೆ ಮಾಡಿ ಭೂಮಿ ಪೂಜೆ ಮಾಡಿ ಹೋಗಿದ್ದಾರೆ. ಇದು ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.. ಇದು ಕಾರ್ಯಗತವಾಗುತ್ತದೆಯೋ ಇಲ್ಲವೋ ಎಂಬುವುದು ನಂಬಿಕೆ ಇಲ್ಲ ಎಂದು ಕಿಡಿಕಾರಿದರು.
ಇವತ್ತು ಜಿಲ್ಲೆಯಲ್ಲಿ ಅತೀ ಹೆಚ್ಚು ನಿಂಬೆ ಬೆಳೆಗಾರರು ಇದ್ದಾರೆ. 8ಸಾವಿರ ಹೆಕ್ಟರ್ ಜಮೀನಿನಲ್ಲಿ ನಿಂಬೆ ಹಣ್ಣು ಬೆಳೆಯುತ್ತಾರೆ.ಆದರೆ ಅವರಿಗೆ ಪ್ರತಿ ಚೀಲಕ್ಕೆ 1 ಸಾವಿರ ಸಿಗುತ್ತಿದೆ. ಅದನ್ನು 4ಸಾವಿರಕ್ಕೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ರೈತರು ಮನವಿ ಮಾಡಿದರೂ ಸಕಾರಾತ್ಮವಾಗಿ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದರು.
ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿದೆ ಎಂದು ಹೇಳುತ್ತಾರೆ. ಚುನಾವಣೆಯ ಇತಿಹಾಸಗಳನ್ನು ನೋಡಿದರೆ ಹಳೆ ಮೈಸೂರು ಭಾಗದಲ್ಲಿ ಎಷ್ಟು ಸ್ಥಾನಗಳಿಸಿದ್ದರೋ ಅಷ್ಟೇ ಸ್ಥಾನಗಳನ್ನು, ನಮ್ಮ ಪಕ್ಷದ ಶಾಸಕರಲ್ಲಿ ಶೇ.50ರಷ್ಟು ಮಂದಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಿಂದ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.