
ನವದೆಹಲಿ,ಫೆ೨೨: ದೇಶದಲ್ಲಿ ಭಾರಿ ಉಗ್ರ ದಾಳಿ ನಡೆಸಲು ಸಂಚು ರೂಪಿಸಲಾಗಿದ್ದ ಸಂಚುನ್ನು ಭೇದಿಸಿರುವ ದೆಹಲಿ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಉಗ್ರರು ದಾಳಿ ನಡೆಸುವ ಕುರಿತು ಗುಪ್ತಚರಸಂಸ್ಥೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಾರ್ಯಚರಣೆ ನಡೆಸಿ ೮ ಮಂದಿ ಸಂಚುಕೊರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರ ಜಾಲವು ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಹಾಗೂ ಬಾಂಗ್ಲಾದೇಶ ಮೂಲದ ಅತಿರೇಕಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿತ್ತು ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಗಾರ್ಮೆಂಟ್ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ಮಿಜಾ ರೆಹಮಾನ್ ಮೊಹಮ್ಮದ್ ಶಾಬತ್, ಉಮರ್, ಮೊಹಮ್ಮದ್ ಲಿತಾನ್, ಮೊಹಮ್ಮದ್ ಶಾಹಿದ್ ಹಾಗೂ ಮೊಹಮ್ಮದ್ ಉಜ್ಜಲ್ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇನ್ನಿಬ್ಬರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಕೆಲವರು ಬಾಂಗ್ಲಾದೇಶ ಪ್ರಜೆಗಳಾಗಿದ್ದು, ತಮ್ಮ ಗುರುತು ಮರೆಮಾಚಲು ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸುತ್ತಿದ್ದರೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾರ್ಯಾಚರಣೆಯ ವೇಳೆ ಎಂಟು ಮೊಬೈಲ್ ಫೋನ್‌ಗಳು ಹಾಗೂ ೧೬ ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ನಡೆಯುತ್ತಿದೆ.
ಇದಕ್ಕೂ ಮುನ್ನ ರಾಷ್ಟ್ರೀಯ ರಾಜಧಾನಿಯಲ್ಲಿ ಪಾಕಿಸ್ತಾನ ಆಧಾರಿತ ಉಗ್ರ ಸಂಘಟನೆ (ಎಲ್‌ಇಟಿ) ದಾಳಿ ಸಂಚು ರೂಪಿಸುತ್ತಿದೆ ಎಂಬ ಗುಪ್ತಚರ ಮಾಹಿತಿ ಲಭಿಸಿತ್ತು. ಚಾಂದಿನಿ ಚೌಕ್ ಪ್ರದೇಶದ ದೇವಾಲಯ ಸೇರಿದಂತೆ ಜನಸಂದಣಿ ಪ್ರದೇಶಗಳು ಹಾಗೂ ಖeಜ ಈoಡಿಣ ಸುತ್ತಮುತ್ತ ಐಇಡಿ ದಾಳಿ ನಡೆಸುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.
ದೆಹಲಿಯಲ್ಲಿ “ಫ್ರೀ ಕಾಶ್ಮೀರ್” ಸೇರಿದಂತೆ ಪ್ರಚೋದನಕಾರಿ ಪೋಸ್ಟರ್‌ಗಳು ಮೆಟ್ರೋ ಜಾಲತಾಣ ಸೇರಿ ೧೦ಕ್ಕೂ ಹೆಚ್ಚು ಕಡೆಗಳಲ್ಲಿ ಪತ್ತೆಯಾಗಿದ್ದವು. ಈ ಪೋಸ್ಟರ್‌ಗಳ ಮೂಲವನ್ನು ಪತ್ತೆಹಚ್ಚುವ ತನಿಖೆಯೇ ತಿರುಪ್ಪೂರಿನ ಜಾಲವನ್ನು ಬೆಳಕಿಗೆ ತಂದಿದೆ ಎಂದು ವಿಶೇಷ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರನ್ನು ಹೆಚ್ಚಿನ ವಿಚಾರಣೆ ಹಾಗೂ ಕಾನೂನು ಕ್ರಮಕ್ಕಾಗಿ ದೆಹಲಿಗೆ ತರಲಾಗುತ್ತಿದೆ. ಈ ಕಾರ್ಯಾಚರಣೆ ದೇಶದ ವಿರುದ್ಧ ರೂಪಿಸಲಾಗಿದ್ದ ಭಾರೀ ಉಗ್ರ ಸಂಚುವನ್ನು ತಡೆದ ಮಹತ್ವದ ಸಾಧನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಹಣಕಾಸು ಮೂಲಗಳು, ಇತರ ಸಹಚರರು ಹಾಗೂ ಗಡಿ ಪಾರ ಸಂಪರ್ಕಗಳ ಬಗ್ಗೆ ತನಿಖೆ ಮುಂದುವರಿದಿದೆ.



























