Home ಮುಖಪುಟ ಸುದ್ದಿ ಕೇಂದ್ರದಿಂದ ೮ ಲಕ್ಷ ಹೊಸ ಅನಿಲ ಕೊಳವೆ ಸಂಪರ್ಕ

ಕೇಂದ್ರದಿಂದ ೮ ಲಕ್ಷ ಹೊಸ ಅನಿಲ ಕೊಳವೆ ಸಂಪರ್ಕ

ನವದೆಹಲಿ, ಏ.೬- ಪಶ್ವಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಅಭಾವ ಎದುರಾಗಿರುವುದನ್ಮು ಕಡಿಮೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ಕಳೆದ ಒಂದು ತಿಂಗಳಿನಿಂದ ಸುಮಾರು ಎಂಟು ಲಕ್ಷ ಹೊಸ ಕೊಳವೆ ಅನಿಲ ಸಂಪರ್ಕ ಕಲ್ಪಿಸಿದೆ.


ಕೇಂದ್ರ ಸರ್ಕಾರ ಮತ್ತು ಅನಿಲ ಕಂಪನಿಗಳು ಅಡುಗೆ ಅನಿಲ ಸಿಲಿಂಡರ್‌ಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೊಳವೆ ಮೂಲಕ ಅಡುಗೆ ಅನಿಲ ಪೂರೈಕೆ ಮಾಡುವ ಹೊಸ ಸಂಪರ್ಕ ಕಲ್ಪಿಸಿದೆ.


ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ಸುಮಾರು ೫೦ ಲಕ್ಷ ಸಿಲಿಂಡರ್‌ಗಳನ್ನು ಸ್ಥಿರವಾಗಿ ವಿತರಿಸುತ್ತಿದ್ದೇವೆ, ದೇಶೀಯ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸುತ್ತಿದ್ದೇವೆ ಮತ್ತು ವಾಣಿಜ್ಯ ಬೇಡಿಕೆಯ ಶೇಕಡಾ ೮೦ ರಷ್ಡು ವರೆಗೆ ಪೂರೈಸುತ್ತಿದ್ದೇವೆ. ಕೊರತೆಯ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಮನೆಗಳಿಗೆ ಮತ್ತು ವಾಣಿಜ್ಯ ಬಳಕೆಗಾಗಿ ಸುಮಾರು ಅರ್ಧದಷ್ಟು ಹೊಸ ಪೈಪ್ ಅನಿಲ ಸಂಪರ್ಕಗಳನ್ನು ಸಕ್ರಿಯಗೊಳಿಸಲಾಗಿದೆ, ಉಳಿದವು ಪ್ರಕ್ರಿಯೆಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ


ಪ್ರತ್ಯೇಕವಾಗಿ, ಪೈಪ್ ಮೂಲಕ ಅನಿಲ ಸಂಪರ್ಕ ಹೊಂದಿರುವವರು ಸಿಲಿಂಡರ್‌ಗಳನ್ನು ಉಳಿಸಿಕೊಳ್ಳುವುದನ್ನು ಮುಂದುವರಿಸದಂತೆ ಸರ್ಕಾರ ಸೂಚಿಸಿದ ನಂತರ ೧೬,೦೦೦ ಕ್ಕೂ ಹೆಚ್ಚು ಎಲ್‌ಪಿಜಿ ಸಂಪರ್ಕಗಳನ್ನು ತ್ಯಜಿಸಲಾಗಿದೆ, ಈ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.


ಅಡುಗೆ ಅನಿಲ ಸಂಪರ್ಕ ತ್ಯಜಿಸಲು ಬಯಸುವ ಜನರು ಗೊತ್ತುಪಡಿಸಿದ ಪೋರ್ಟಲ್‌ನಲ್ಲಿ ವಿವರಗಳನ್ನು ಸಲ್ಲಿಸಬಹುದು, ಸ್ವಯಂಪ್ರೇರಣೆಯಿಂದ ತಮ್ಮ ಸಂಪರ್ಕಗಳನ್ನು ತ್ಯಜಿಸಿದ ಗ್ರಾಹಕರನ್ನು ಗುರುತಿಸಲು ’ಹಾಲ್ ಆಫ್ ಫೇಮ್’ ಅನ್ನು ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.


ಪೂರೈಕೆ ಕೊರತೆ ಮತ್ತು ದೀರ್ಘ ಸರತಿ ಸಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನಡುವೆ, ಅಧಿಕಾರಿಗಳು ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಡುಗೆ ಅನಿಲದ ಸಾಕಷ್ಟು ದಾಸ್ತಾನು ಇದ್ದು, ಅವುಗಳನ್ನು ಮರುಪೂರಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.


ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಚೆನ್ನಾಗಿ ನಿರ್ವಹಿಸಿದ್ದೇವೆ ಸರಬರಾಜು ಸುಗಮಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದಿದ್ದಾರೆ.


ಸಾಧ್ಯವಾದಾಗಲ್ಲೆಲ್ಲಾ ಇಂಡಕ್ಷನ್ ಮತ್ತು ಎಲೆಕ್ಟ್ರಿಕ್ ಕುಕ್‌ಟಾಪ್‌ಗಳಂತಹ ಪರ್ಯಾಯಗಳನ್ನು ಬಳಸುವಂತೆ ಕೇಂದ್ರ ಸರ್ಕಾರ ಜನರನ್ನು ಒತ್ತಾಯಿಸಿದೆ. ಆನ್‌ಲೈನ್ ಸಿಲಿಂಡರ್ ಬುಕಿಂಗ್‌ಗಳು ಶೇಕಡಾ ೯೫ ಕ್ಕೆ ಏರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

೫ ಕೆಜೆ ಸಿಲಿಂಡರ್ ವಿತರಣೆ
ನಿಯಮಿತ ಎಲ್‌ಪಿಜಿ ಸಂಪರ್ಕವಿಲ್ಲದ ವಲಸೆ ಜನರಿಗೆ ಸಹಾಯ ಮಾಡಲು, ತೈಲ ಕಂಪನಿಗಳು ಮಾರ್ಚ್ ೨೩ ರಿಂದ ಸುಮಾರು ೬.೬ ಲಕ್ಷ ಪೋರ್ಟಬಲ್ ೫ ಕೆಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡಿವೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಇದರಲ್ಲಿ ನಿನ್ನೆ ೯೦,೦೦೦ ಸೇರಿದಂತೆ, ಯುದ್ಧಕ್ಕೆ ಮೊದಲು ದೈನಂದಿನ ಸರಾಸರಿ ೭೦-೭೫,೦೦೦ ಸಿಲಿಂಡರ್ ವಿತರಿಸಲಾಗಿದೆ.ಪ್ಯಾಕೇಜಿಂಗ್ ಘಟಕಗಳಿಂದ ಹಿಡಿದು ಔಷಧದವರೆಗೆ, ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಕಂಪನಿಗಳು ಪೂರೈಕೆ ಅಡಚಣೆಗಳಿಂದ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.