Home ಜಿಲ್ಲೆ ಆಸ್ತಿ ತೆರಿಗೆಯಲ್ಲಿ ಶೇ 5 ರಷ್ಟು ರಿಯಾಯಿತಿ

ಆಸ್ತಿ ತೆರಿಗೆಯಲ್ಲಿ ಶೇ 5 ರಷ್ಟು ರಿಯಾಯಿತಿ

ಕೊಲ್ಹಾರ: ಏ.5:ಕೊಲ್ಹಾರ ಪಟ್ಟಣ ಪಂಚಾಯತ ಕಾರ್ಯಾಲಯ ,ಕೊಲ್ಹಾರ ವ್ಯಾಪ್ತಿಯಲ್ಲಿನ ಸಮಸ್ತ ಆಸ್ತಿ ತೆರಿಗೆ ಮಾಲೀಕರು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ನಿಯಮಗಳಂತೆ ಪ್ರತಿ ವರ್ಷವು ಎಪ್ರಿಲ್ ತಿಂಗಳಿನಲ್ಲಿ ಆಸ್ತಿ ತೆರಿಗೆ ಮೇಲೆ ಶೇ .5% ರಷ್ಟು ರಿಯಾಯತಿಯಲ್ಲಿ ಪಾವತಿಸಲು ಅವಕಾಶವಿರುತ್ತದೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಿರೇಶ ಹಟ್ಟಿ ತಿಳಿಸಿದ್ದಾರೆ.

ತೆರಿಗೆ ಪಾವತಿಸುವ ಎಲ್ಲ ಮಾಲೀಕರುಗಳಿಗೆ ಎಪ್ರಿಲ್ ತಿಂಗಳಿನಲ್ಲಿ ಶೇ.5% ರಷ್ಟು ವಿನಾಯಿತಿ ಇರುವುದರಿಂದ ಈ ಸುವರ್ಣಾವಕಾಶಗಳನ್ನು ಪಡೆದು ಆಸ್ತಿ ಮಾಲೀಕರು ಪಟ್ಟಣ ಪಂಚಾಯತಿ ಆಸ್ತಿ ತೆರಿಗೆಯನ್ನು ಪಾವತಿಸಲು ಕೋರಿದ್ದಾರೆ. ಆಸ್ತಿ ತೆರಿಗೆಯನ್ನು ಎಪ್ರಿಲ್ 30ರ ಒಳಗೆ ಪಾವತಿಸಿದರೆ ಆಸ್ತಿ ತೆರಿಗೆ ಮೇಲೆ ಶೇ.5% ರಷ್ಟು ರಿಯಾಯಿತಿ ನೀಡಲಾಗುವುದು.ಮೇ- ಜೂನ್ ತಿಂಗಳಿನಲ್ಲಿ ದಂಡರಹಿತವಾಗಿ ಪಾವತಿಸಲು ಅವಕಾಶವಿದೆ. ಆದರೆ ಜುಲೈ ತಿಂಗಳಿನಿಂದ ಪ್ರತಿ ತೆರಿಗೆಯ ಮೇಲೆ ಶೇ.2 ರಂತೆ ದಂಡವನ್ನು ಪಾವತಿಸಬೇಕಾಗುತ್ತದೆ. ಬಾಕಿ ಇರುವ ನೀರಿನ ಶುಲ್ಕ, ಉದ್ದಿಮೆ ಪರವಾನಿಗೆ ಶುಲ್ಕ, ವಾಣಿಜ್ಯ ಮಳಿಗೆ ಬಾಡಿಗೆ ಶುಲ್ಕ ಪಾವತಿಸಲು ವಿನಂತಿಸಿದರು. ಪೆÇೀನ್ ಪೇ, ಗೂಗಲ್ ಪೇ ಮೂಲಕ ತೆರಿಗೆ ಪಾವತಿಸಲು ಅವಕಾಶವಿರುತ್ತದೆ. ಪ ಪಂಗೆ ತೆರಿಗೆ ಪಾವತಿಸಿ , ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಿ ಎಂದರು.