
ಕಲಬುರಗಿ,ಜು.21-ನಗರದ ಆಳಂದ ಚೆಕ್‍ಪೋಸ್ಟ್ ಹತ್ತಿರ ¨ಸ್ಸಿಗಾಗಿ ತಾಯಿ-ಮಗಳು ಕಾಯುತ್ತ ನಿಂತಿದ್ದ ವೇಳೆ ಬ್ಯಾಗ್‍ನ್ನು ಅಲ್ಲಿಯೇ ಇಟ್ಟು ಪಕ್ಕದಲ್ಲಿರುವ ಬೇಕರಿಗೆ ವಾಟರ್ ಬಾಟಲ್ ತರಲು ಹೋದ ವೇಳೆ ಬ್ಯಾಗಿನಲ್ಲಿದ್ದ 2 ಲಕ್ಷ ರೂ.ಮೌಲ್ಯದ 40 ಗ್ರಾಂ.ಬಂಗಾರದ ತಾಳಿ ಸರವನ್ನು ಕಳ್ಳರು ಕಳವು ಮಾಡಿದ್ದಾರೆ.
ನಗರದ ಶಿವಲಿಂಗೇಶ್ವರ ಕಾಲೋನಿಯ ಶಾಂತಾಬಾಯಿ ಪಂಡಿತ ದೇವಂತಗಿ ಮತ್ತು ಅವರ ಮಗಳು ಸ್ವಾತಿ ಸಚಿನ ಘೋಡಕೆ ಅವರು ಆಳಂದ ತಾಲ್ಲೂಕಿನ ಚಿತಲಿ ಗ್ರಾಮಕ್ಕೆ ಹೋಗಲೆಂದು ಆಳಂದ ಚೆಕ್‍ಪೋಸ್ಟ್ ಹತ್ತಿರ ಬಸ್ಸಿಗಾಗಿ ಕಾಯುತ್ತ ನಿಂತಿದ್ದರು. ಈ ವೇಳೆ ಬ್ಯಾಗನ್ನು ಅಲ್ಲಿಯೇ ಇಟ್ಟು ಪಕ್ಕದಲ್ಲಿರುವ ಬೇಕರಿಗೆ ವಾಟರ್ ಬಾಟರ್ ತರಲು ಹೋಗಿದ್ದಾರೆ. ಈ ವೇಳೆ ಕಳ್ಳರು ಇವರ ಬ್ಯಾಗಿನ ಜಿಪ್ ತೆಗೆದು ಅದರೊಳಗಿದ್ದ 2 ಲಕ್ಷ ರೂ.ಮೌಲ್ಯದ 40 ಗ್ರಾಂ.ಬಂಗಾರದ ತಾಳಿ ಚೈನ ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.