೨.೮ ಕೋಟಿ ಡ್ರಗ್ಸ್ ವಶ ೨೪ ಮಂದಿ ಬಂಧನ

೯ ಎ ೫ನಗರದ ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆ ಪೊಲೀಸರು ಡ್ರಗ್ಸ್ ಪ್ಲೆಡರ್‌ಗಳಿಂದ ವಶಪಡಿಸಿಕೊಂಡಿರುವ ಡ್ರಗ್ಸ್ ಅನ್ನು ನಗರ ಪೊಲೀಸ್ ಆಯುಕ್ತ ಸೀಮಂತಕುಮಾರ್ ಸಿಂಗ್‌ರವರು ವೀಕ್ಷಿಸುತ್ತಿರುವುದು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಇದ್ದಾರೆ.

ಬೆಂಗಳೂರು,ಫೆ.೯-ಮಾದಕ ವಸ್ತು ಮಾರಾಟ ದಂಧೆಯ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ೨೪ ಮಂದಿ ಡ್ರಗ್ಸ್ ಫೆಡ್ಲರ್ ಗಳನ್ನು ಬಂಧಿಸಿ ೨.೦೮ ಕೋಟಿ ಮೌಲ್ಯದ ಹೈಡ್ರೋ ಗಾಂಜಾ, ಗಾಂಜಾ, ಚರಸ್, ಎಂಡಿಎಂಎ ಜಪ್ತಿ ಮಾಡಿದ್ದಾರೆ.


ಬಂಧಿತ ಹೊರ ರಾಜ್ಯದ ಐವರು ರಾಜ್ಯದ೧೯ ಸೇರಿ ೨೪ ಮಂದಿ ಆರೋಪಿಗಳಿಂದ ೧ ಕೆ.ಜಿ ೨೩ ಗ್ರಾಂ ಹೈಡ್ರೋ ಗಾಂಜಾ, ೭೬ ಕೆಜಿ ಗಾಂಜಾ, ೧೧ ಕೆ.ಜಿ ೬೦೦ ಗ್ರಾಂ ಚರಸ್ ಮತ್ತು ೧೨೧ ಗ್ರಾಂ ಎಂಡಿಎಂಎ ಸೇರಿ ೨.೦೮ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳ ಮತ್ತು ಸಂಘಟಿತ ಅಪರಾಧ ದಳ ಸೇರಿದಂತೆ ಕುಮಾರಸ್ವಾಮಿ ಲೇಔಟ್,ಹೆಬ್ಬಾಳ,ಜೆ.ಸಿ. ನಗರ, ಬಸವನಗುಡಿ,ಗೋವಿಂದರಾಜನಗರ,ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಹೈಡ್ರೋ ಗಾಂಜಾ, ಗಾಂಜಾ, ಚರಸ್ ಮತ್ತು ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನಾಧಾರಿಸಿ ದಾಳಿ ಮಾಡಿ ಹೊರರಾಜ್ಯದ ವ್ಯಕ್ತಿಗಳನ್ನೊಳಗೊಂಡ ೨೪ ಮಂದಿ ಡ್ರಗ್ಸ್ ಫೆಡ್ಲರ್ ಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳಿಂದ ಡ್ರಗ್ಸ್ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ


ಪ್ರಕರಣದ ಎಲ್ಲಾ ಆರೋಪಿಗಳಿಗೆ ಹೈಡ್ರೋ ಗಾಂಜಾ, ಗಾಂಜಾ, ಚರಸ್ ಮತ್ತು ಎಂಡಿಎಂಎ ಯನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುತ್ತವೆ ಎಂದು ಹೇಳಿದರು.


ಈ ಕಾರ್ಯಾಚರಣೆಗಳನ್ನು ಡಿಸಿಪಿಗಳಾದ ಬಿ.ಎಲ್. ಶ್ರೀಹರಿಬಾಬು,ರಾಜಾ ಇಮಾಮ್ ಕಾಸಿಂ, ಅನಿತ ಬಿ ಹದ್ದಣ್ಣವರ್, ಬಿ.ಎಸ್.ನೇಮಗೌಡ, ಲೋಕೇಶ್ ಬಿ ಜಗಲಾಸರ್, ಯತೀಶ್.ಎನ್ ಅವರ ಮಾರ್ಗದರ್ಶನದಲ್ಲಿ ಅಧಿಕಾರಿ ಸಿಬ್ಬಂದಿ ಕೈಗೊಂಡಿದ್ದರು ಎಂದು ತಿಳಿಸಿದರು.