
ಬೆಂಗಳೂರು: ರಾಜಧಾನಿ ಬೆಂಗಳೂರು, ಶಿವಮೊಗ್ಗ, ಧಾರವಾಡ ಮತ್ತು ದಾವಣಗೆರೆಯಲ್ಲಿ ಏಕಕಾಲಕ್ಕೆ 29 ಸ್ಥಳಗಳಲ್ಲಿ
ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ನಾಲ್ವರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿ 22 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಹಚ್ಚಿದ್ದಾರೆ.
ಬಲೆಗೆ ಬಿದ್ದ ಅಧಿಕಾರಿಗಳು
- ಪುರುಷೋತ್ತಮ ದಾಸ್ ಹೆಗಡೆ, ಕಾರ್ಯಪಾಲಕ ಅಭಿಯಂತರ, ಇವರಿಗೆ ಸೇರಿದ 14 ಸ್ಥಳಗಳಲ್ಲಿ ಕೈಗೊಂಡ ಶೋಧದಲ್ಲಿ 1 ನಿವೇಶನ, 2 ವಾಸದ ಮನೆಗಳು, 2 ಶಿಕ್ಷಣ ಸಂಸ್ಥೆಗಳು, 11 ಎಕರೆ 30 ಗುಂಟೆ ಕೃಷಿ ಜಮೀನು, 44,23 ಲಕ್ಷ ನಗದು 60,79,630 ರೂ ಮೌಲ್ಯದ ಚಿನ್ನಾಭರಣಗಳು, 27 ಲಕ್ಷ ನಿಶ್ಚಿತ ಠೇವಣಿ ಸೇರಿ 12,84,33,885 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
- ಹೆಚ್. ಎಂ ಜನಾರ್ಧನ, ಅಧೀಕ್ಷಕ ಅಭಿಯಂತರರು ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಇವರಿಗೆ ಸೇರಿದ 6 ಸ್ಥಳಗಳಲ್ಲಿ ಶೋಧ ಕೈಗೊಂಡು 1 ನಿವೇಶನ, 3 ವಾಸದ ಮನೆಗಳು,34 ಎಕರೆ ಕೃಷಿ ಜಮೀನು , 1,70 ಕೋಟಿ ನಗದು,7,08,262 ರೂ ಮೌಲ್ಯದ ಚಿನ್ನಾಭರಣಗಳು, 20 ಲಕ್ಷ ಮೌಲ್ಯದ- ವಾಹನಗಳು 60 ಲಕ್ಷ ಮೌಲ್ಯದ ವಸ್ತುಗಳು ಸೇರಿ 4,77,39,262 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
- ಅರ್ಜುನ್, ಆರ್. ಹೆಚ್. ಎ.ಇ.ಇ (ಸಿವಿಲ್). ಬೆಸ್ಕಾಂ, ದಾವಣಗೆರೆ., ಇವರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ಕೈಗೊಂಡು 2 ನಿವೇಶನಗಳು, 3 ವಾಸದ ಮನೆಗಳು, 2 ಎಕರೆ 20 ಗುಂಟೆ ಕೃಷಿ ಜಮೀನು,800/- ನಗದು, 2,49,100 ರೂ ಬೆಲೆ ಬಾಳುವ ಚಿನ್ನಾಭರಣಗಳು 16,20 ಲಕ್ಷ ಬೆಲೆ ಬಾಳುವ ವಾಹನಗಳು 13 ಲಕ್ಷ ಬೆಲೆ ಬಾಳುವ ಇತರೆ ವಸ್ತುಗಳು ಸೇರಿ 2,49,41,400 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
- ಸೋಮಲಿಂಗಪ್ಪ ಫಕೀರಪ್ಪ ಸಿದ್ದನಗೌಡರ್, ಸರ್ವೆ ಸೂಪರ್ ವೈಸರ್, ಎ.ಡಿ.ಎಲ್.ಆರ್. ಕಛೇರಿ, ಧಾರವಾಡ., ಇವರಿಗೆ ಸೇರಿದ 4 ಸ್ಥಳಗಳಲ್ಲಿ ಶೋಧ ಕೈಗೊಂಡು 3 ನಿವೇಶನಗಳು, 1 ವಾಸದ ಮನೆ, 3 ಎಕರೆ ಕೃಷಿ ಜಮೀನು, 82,840 ನಗದು, ರೂ 35,41 ಲಕ್ಷ ಮೌಲ್ಯದ ಚಿನ್ನಾಭರಣಗಳು,14,90 ಲಕ್ಷ ಬೆಲೆ ಬಾಳುವ ವಾಹನಗಳು, ರೂ. 50 ಲಕ್ಷ ಬೆಲೆ ಬಾಳುವ ಇತರೆ ವಸ್ತುಗಳು ಸೇರಿ 2.64,82,840 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
























