2026ರ ಕ್ರಿಕೆಟ್ ಪಂದ್ಯಾವಳಿ

ಸಂಜೆವಾಣಿ ವಾರ್ತೆ
ಹನೂರು.ಮಾ.3:-
ಕಣ್ಣೂರು ಗ್ರಾಮದಲ್ಲಿ ಗ್ರಾಮಮಟ್ಟದ ಬುದ್ಧ ಬಸವ ಅಂಬೇಡ್ಕರ್ ಹೆಸರಿನಲ್ಲಿ 2026ರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಕ್ರೀಡಾ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ಕಪ್ ವಿತರಣೆ ಮಾಡಲಾಯಿತು.


ಇದೆ ವೇಳೆ ಬಿ.ಜೆ.ಪಿ ಮಂಡಲ ಅಧ್ಯಕ್ಷ ವೃಷಭೇಂದ್ರ ಸ್ವಾಮಿ ಮಾತನಾಡಿ ಅಕ್ಷರಾಭ್ಯಾಸ ಮನಸ್ಸನ್ನು ಸುದೃಢಗೊಳಿಸಿದರೆ ಕ್ರೀಡೆ ದೇಹವನ್ನು ಬಲಿಷ್ಠ ಗೊಳಿಸುತ್ತದೆ ಯುವಕರು ಪಠ್ಯ ಚಟುವಟಿಕೆ ಹಾಗೂ ಪಠ್ಯೇತರ ಚಟುವಟಿಕೆ ಎರಡರಲ್ಲೂ ಸಕ್ರಿಯವಾಗಿರಬೇಕು.


ಗುರು ಹಿರಿಯರ ಆಶಯದಂತೆ ನಾವು ನೀವೆಲ್ಲರೂ ಭಾರತದ ದೇಶದ ಏಕತೆ ಸಮಗ್ರತೆ ಹಾಗೂ ಐಕ್ಯತೆಗಾಗಿ ಶ್ರಮಿಸಬೇಕು ಸಮಾಜದಲ್ಲಿ ಸಂಸ್ಕಾರವಂತರಾಗಿ ಬಾಳಬೇಕು ಎಂದು ತಿಳಿಸಿದರು.
ಕಣ್ಣೂರು ಬುಲ್ಸ್ ಭೀಮ್ ಬಾಯ್ಸ್ ಜೈ ಭೀಮ್ ವಾರಿಯರ್ ಮೃತ್ಯುಂಜಯ ಯಂಗ್ ಟೈಗರ್ ಕಣ್ಣೂರ್ ಕ್ಯಾಪ್ಟನ್ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಮೃತ್ಯುಂಜಯ ತಂಡ ಹಾಗೂ ಜೈ ಭೀಮ್ ವಾರಿಯರ್ ರೋಚಕ ಆಟ ಆಡಿ ಜೈ ಭೀಮ್ ವಾರಿಯರ್ಸ್ ತಂಡ ಎಂಟು ಓವರ್ ಗಳಲ್ಲಿ 56 ರನ್ ಗಳಿಸಿ ದ್ವಿತೀಯ ಸ್ಥಾನ ಪಡೆದುಕೊಂಡರೆ ಮೃತ್ಯುಂಜಯ ತಂಡ ಏಳು ಓವರ್ ಗಳಲ್ಲಿ 57 ರನ್ ಗಳಿಸಿ ಪ್ರಥಮ ಸ್ಥಾನ ಪಡೆಯಿತು. ಪಂದ್ಯ ಶ್ರೇಷ್ಠ ಅರವಿಂದ ಪಡೆದರೆ ಸರಣಿ ಶ್ರೇಷ್ಠ ರೇವಂತ್ ಪಡೆದರು ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಕಿರಣ್ ಹೊರಹೊಮ್ಮಿದರು.


ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕುಮಾರ್ ಗ್ರಾಮ ಪಂಚಾಯತಿ ಸದಸ್ಯರಾದ ಕಾಂತರಾಜು ಬಸವಣ್ಣ ಮುಖಂಡರುಗಳಾದ ಮಲ್ಲೇಶ್ ರಾಜಪ್ಪ ದಿವಾನ್ ಕುಮಾರ್ ಮಹೇಶ್ ಆನಂದ್ ಪುನೀತ್ ಮಲ್ಲರಾಜು, ಚಿನ್ನು ಶಿವರಾಜ್ ಸೇರಿದಂತೆ ನೂರಾರು ಯುವಕರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.