
ಜೇವರ್ಗಿ:ಮಾ.31: ಹತ್ತಿ ಮಾರಾಟದಲ್ಲಿ ಮ್ಯಾನೇಜರ್ ತನ್ನ ಮಾಲೀಕನಿಗೆ 20 ಲಕ್ಷ ವಂಚಿಸಿರುವ ಕುರಿತು ಜೇವರ್ಗಿ ಪೆÇಲೀಸ್ ಠಾಣೆಯಲ್ಲಿ ಮಾರ್ಚ್ 26ರಂದು ಪ್ರಕರಣ ದಾಖಲಾಗಿದೆ.
ಜೇವರ್ಗಿ ತಾಲ್ಲೂಕಿನ ಸೋಮನಾಥಹಳ್ಳಿ ಗ್ರಾಮದ ಬಸವರಾಜ ವಿರೂಪಾಕ್ಷಪ್ಪ ಪಾಟೀಲ, ಅವರ ಪತ್ನಿ ನಿರ್ಮಲಾ ಹಾಗೂ ಸೊಸೆ ಸಂಗೀತಾ ಮಾಲೀಕತ್ವದ ಶಿವಪಾರ್ವತಿ ಹೆಸರಿನ ಕಾಟನ್ ಜಿನ್ನಿಂಗ್ ಫ್ಯಾಕ್ಟರಿ ಚಿಗರಳ್ಳಿ ಕಳೆದ ವರ್ಷದ ಇದರಲ್ಲಿ ಸೆಪ್ಟೆಂಬರ್‍ನಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಗುಜರಾತ್‍ನ ಮಹೇಂದ್ರಕುಮಾರ ಜಲಾರಿಯಾ ಮಾ.19ರಂದು 30 ಲಕ್ಷ ಬೆಲೆಬಾಳುವ 120 ಕಾಟನ್ ಬೆಲ್‍ಗಳನ್ನು (ಬೀಜದಿಂದ ಬೇರ್ಪಡಿಸಿದ ಹತ್ತಿ) ಕೇವಲ 10 ಲಕ್ಷಕ್ಕೆ ಮಾರಿದ್ದಾಗಿ ಬಸವರಾಜ ದೂರು ನೀಡಿದ್ದಾರೆ. ಯಾರಿಗೆ ಮಾರಿದ್ದಾಗಿ ಕೇಳಿದರೂ ಹೇಳದೇ ಮ್ಯಾನೇಜರ್ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಅವರುದೂರಿನಲ್ಲಿ ತಿಳಿಸಿದ್ದಾರೆ.



























