
ಕಲಬುರಗಿ,ಫೆ.8-ಇಲ್ಲಿನ ಮಾತಾ ಮಾಣಿಕೇಶ್ವರಿ ನಗರದಲ್ಲಿರುವ ಕೋಕಿಲಾ ಪರಮೇಶ್ವರಿ ದೇವಸ್ಥಾನದ 12ನೇ ವಧರ್ಂತಿ ಮಹೋತ್ಸವ ಫೆ.11 ರಂದು ಪ್ರಾರಂಭವಾಗಿ ಫೆ.23 ರಂದು ಮಂಗಲಗೊಳ್ಳುವದು.
ಫೆ.11 ರಂದು ಸಾಯಂಕಾಲ 6 ಗಂಟೆಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಚಾರ್ಯರಿಂದ ಕೋಕಿಲಾಪರಮೇಶ್ವರಿ ದೇವಿಗೆ ಅಭಿಷೇಕ, ವಿಶೇಷ ಪೂಜೆಯೊಂದಿಗೆ ನಡೆಯುವುದು.
ಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಚಿಕ್ಕ ಮಕ್ಕಳಿಂದ ಶರಣರ ವಚನಗಳ ಕಂಠಪಾಠ ಸ್ಪರ್ಧೆ ಹಾಗೂ ರಾತ್ರಿಯ ಜಾಗರಣೆ ನಿಮಿತ್ಯ ವಿವಿಧ ಕಲಾವಿದರಿಂದ ಭಜನೆ ಕಾರ್ಯಕ್ರಮ ಜರಗುವದು.
ಫೆ.12 ರಂದು ಬೆಳಿಗ್ಗೆ ಕೋಕಿಲಾಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರ ಪೂಜೆ, ಬೆಳಿಗ್ಗೆ 10 ಗಂಟೆಗೆ ದೇವಿಯ ಪಲ್ಲಕ್ಕಿ ಉತ್ಸವ ಜರಗುವದು. ಪಲ್ಲಕ್ಕಿ ಉತ್ಸವವು ವಿವಿಧ ಕಲಾಮೇಳಗೊಳೊಂದಿಗೆ ಮಾತಾ ಮಾಣಿಕೇಶ್ವರಿ ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 1 ಗಂಟೆಗೆ ಉತ್ಸವವು ದೇವಸ್ಥಾನ ತಲುಪಿದ ನಂತರ ಮಹಾಪ್ರಸಾದದೊಂದಿಗೆ ವಧರ್ಂತಿ ಮಹೋತ್ಸವ ಮಂಗಲಗೊಳ್ಳುವದು.
ಅತ್ಯಂತ ವಿಜೃಂಭಣೆಯಿಂದ ಜರುಗುವ ಕೋಕಿಲಾಪರಮೇಶ್ವರಿ ದೇವಸ್ಥಾನದ 12 ವರ್ಷದ ವಧರ್ಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು
ಭಾರತೇಶ ಹಾಸಿಲಕರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.























