
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಡಿಯಲ್ಲಿ ಕೆಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಖಾಸಗಿ ಏಜೆನ್ಸಿಯ ಮೂಲಕ ನೇಮಕ ಮಾಡಿಕೊಂಡ ನೌಕರರಿಗೆ ಸಮರ್ಪಕ ವೇತನೆ ನೀಡದಿರುವುದು ಮತ್ತು ಪಿಎಫ್, ಇಎಸ್‍ಐ ಜಮಾ ಮಾಡದೇ ಅಕ್ರಮವಾಗಿ ಹಣ ವಸೂಲಿಯಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಂಡು ಗುತ್ತಿಗೆ ನೌಕರರಿಗೆ ನ್ಯಾಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ಕಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಅರುಣಕುಮಾರ ಎಂ.ವೈ.ಪಾಟೀಲ ಅವರಿಗೆ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು


















