ಕಲಬುರಗಿ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕರ್ನಾಟಕ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಕೇಂದ್ರ ಸರ್ಕಾರ ಕೂಡಲೇ ಅನುಮೋದನೆ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ ಮಾಕ್ರ್ಸವಾದಿ ಜಿಲ್ಲಾ ಸಮಿತಿ ನೆತೃತ್ವದಲ್ಲಿ ನಗರದ ಸಂಸದರ ಕಾರ್ಯಾಲಯದ ಎದುರು ಬೃಹತ ಪ್ರತಿಭಟನೆ ಕೈಗೊಳ್ಳಲಾಯಿತು. ಕೆ.ನಿಲಾ, ಮೀನಾಕ್ಷಿ ಬಾಳಿ, ಶಾಂತಾ ಗಂಟೆ, ಸುಧಾಮ ಧನ್ನಿ, ವಿರುಪಾಕ್ಷಪ್ಪ ತಡಕಲ್, ಸಾಬಮ್ಮ, ಚಂದಮ್ಮ ಗೋಳಾ, ಪಾಂಡುಗಂಗ ಎಂ, ಸಾಬಮ್ಮ ಎಂ.ಕಾಳಗಿ, ಪದ್ಮಿನಿ ಕಿರಣಗಿ ಸೇರಿದಂತೆ ಹಲವರು ಇದ್ದರು.