ಕಲಬುರಗಿ: ರಾಜ್ಯದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾರಿಗೊಳಿಸಲಾಗುತ್ತಿರುವ ವಿಶೇಷ ಸಮಗ್ರ ಪರಿಶೀಲನೆ ಪ್ರಕ್ರಿಯೆಯನ್ನು ಕಾನೂನುಬದ್ಧ, ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಸಬೇಕು ಎಂದು ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಚುನಾವಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಲೀಮ್ ಚಿತ್ತಾಪೂರಿ, ಮುಬಿನ್ ಅಹ್ಮದ್, ಹೈದರ್ ಅಲಿ ಬಾಗವಾನ್, ಸಾದಿಕ್ ಪಟೇಲ್, ನಸಿರುದ್ದೀನ್ ಸೇಠ, ರಿಜ್ವಾನ್ ಸಿದ್ದಿಕ್ ಇದ್ದರು.