ಕಲಬುರಗಿ: ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಪೌರ ಕಾರ್ಮಿಕರಾದ ರುಕ್ಮಿಣಿ ಮತ್ತು ದುರ್ಗಾಬಾಯಿ ಅವರು ಚಾಲನೆ ನೀಡಿದರು. ವೇದಿಕೆ ಜಿಲ್ಲಾಧ್ಯಕ್ಷ ಸಂದೀಪ ಭರಣಿ, ಸತೀಶ ಕಡೂನ್, ಸಂತೋಷ, ವಿಷ್ಣುವರ್ಧನ್, ಗೌತಮ, ವಿಶ್ವನಾಥ, ಅನಿಲ ಎ.ಸ್ಟಾರ್ ಸೇರಿದಂತೆ ಮತ್ತಿತರರು ಇದ್ದರು.