
ಕಲಬುರಗಿ: ದೇವದಾಸಿ ಮಹಿಳೆಯರ ಕುಟುಂಬಕ್ಕೆ 5 ಎಕರೆ ಭೂಮಿ ನೀಡಲು, 6 ಸಾವಿರ ಪೆನ್ಶನ್ ಹೆಚ್ಚಳ ಮಾಡಲು, ವಯಸ್ಸಿನ ಮಿತಿ ಇಲ್ಲದೆ ದೇವದಾಸಿ ಮಹಿಳೆಯರ ಮೂರು ತಲೆಮಾರುಗಳ ಸಮೀಕ್ಷೆಗೆ ಒಳಪಡಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ವತಿಯಿಂದ ನಗರದ ಮೊಹ್ಮದ್ ಹಸನಖಾನ್ ಭವನದಲ್ಲಿಂದು ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಸಂಘದ ಗೌರವಾಧ್ಯಕ್ಷ ಯು.ಬಸವರಾಜ ಮಾತನಾಡಿದರು. ಸಂಘದ ಅಧ್ಯಕ್ಷೆ ಜಿ.ಹುಲಿಗೆಮ್ಮ, ಬಿ.ಮಾಳಮ್ಮ, ಎ.ಸ್ವಾಮಿ, ಚಂದಮ್ಮ, ಸುಧಾಮ ಧನ್ನಿ ಇದ್ದರು.




















